ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿಕೊಟ್ಟ ಹೆಮ್ಮೆಯ ವೇಟ್‍ಲಿಫ್ಟರ್ ಮೀರಾಬಾಯಿ ಚಾನು ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿರುವುದು ಅತೀವ ಆನಂದ ನೀಡಿದೆ ಎಂದು ಹೇಳಿದ್ದಾರೆ.
Advertisement
ಪದಕ ಗೆದ್ದ ಖುಷಿಯನ್ನು ಟ್ವೀಟ್ ಮೂಲಕ ಹಂಚಿಕೊಂಡ ಮೀರಾಬಾಯಿ ಚಾನು, ಇದು ನನಗೆ ಕನಸು ನನಸಾದ ಗಳಿಗೆ. ಈ ಗೆಲುವನ್ನು ನನ್ನ ದೇಶ ಹಾಗೂ ನನ್ನ ಗೆಲುವಿಗಾಗಿ ನನ್ನ ಜರ್ನಿಯುದ್ದಕ್ಕೂ ಪಾರ್ಥಿಸಿದ ಕೋಟ್ಯಂತರ ಜನರಿಗೆ ಅರ್ಪಿಸುತ್ತೇನೆ. ತಮ್ಮ ಕುಟುಂಬದ ಪ್ರೋತ್ಸಾಹ ನನ್ನೊಂದಿಗೆ ಸದಾ ಇತ್ತು. ತಮ್ಮ ತಾಯಿ ತಮಗಾಗಿ ಮಾಡಿದ ತ್ಯಾಗ ಮತ್ತು ತನ್ನ ಮೇಲೆ ನಂಬಿಕೆಯಿಂದ ಈ ಗೆಲುವು ಸಾಧ್ಯವಾಯಿತು. ಸರ್ಕಾರದ ಪ್ರೋತ್ಸಾಹ ಹಾಗೂ ಕೋಚ್ ವಿಜಯ್ ಶರ್ಮಾ ಅವರಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಟ್ವಿಟ್ಟರ್ ನಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
Advertisement
I am really happy on winning silver medal in #Tokyo2020 for my country ???????? pic.twitter.com/gPtdhpA28z
— Saikhom Mirabai Chanu (@mirabai_chanu) July 24, 2021
Advertisement
ಮೀರಾಬಾಯಿ ಚಾನುಗೆ ಡಾ.ನಾರಾಯಣಗೌಡ ಅಭಿನಂದನೆ
ಟೋಕಿಯೋ ಒಲಿಂಪಿಕ್ಸ್‍ನ ಮಹಿಳೆಯರ 49 ಕೆಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಬೆಳ್ಳಿ ಪದಕ ಗೆದ್ದ ಮಣಿಪುರದ ಮೀರಾಬಾಯಿ ಚಾನು ಅವರಿಗೆ ಕರ್ನಾಟಕದ ಯುವ ಸಬಲೀಕರಣ ಮತ್ತು ಕ್ರೀಡೆ ಸಚಿವ ಡಾ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.
Advertisement
ಮೀರಾಬಾಯಿ ಚಾನು ಅವರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಭಾರತೀಯರ ನಿರೀಕ್ಷೆ ಹುಸಿಗೊಳಿಸದ ಮೀರಾ ಅವರು ಮೊದಲ ದಿನವೇ ಬೆಳ್ಳಿ ಪದಕ ಗೆದ್ದು ಶುಭಾರಂಭ ಮಾಡಿದ್ದಾರೆ. ಮೀರಾ ಅವರ ಗೆಲುವು ಭಾರತದ ಎಲ್ಲ ಕ್ರೀಡಾಪಟುಗಳಲ್ಲಿ ಇನ್ನಷ್ಟು ಹುಮ್ಮಸ್ಸು ತುಂಬುವಂತೆ ಮಾಡಿದೆ. ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಮೀರಾಬಾಯಿ ಚಾನು ಅವರು ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಪದಕ ಬೇಟೆಗೆ ನಾಂದಿ ಹಾಡಿದ ಮೀರಾ ಅವರಿಗೆ ಸಚಿವರು ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಸಂಭ್ರಮ – ಮೀರಾಬಾಯಿ ಚಾನುವಿಗೆ ಬೆಳ್ಳಿ!
ಭಾರತದ ಕೀರ್ತಿಪತಾಕೆ ಹಾರಿಸಿದ ಮೀರಾಬಾಯಿ ಚಾನು ಅವರಿಗೆ ಅಭಿನಂದನೆಗಳು. Congratulations to @mirabai_chanu on winning the first silver medal for India at #Olympics2020. You have lifted the spirits of us Indians.#Cheer4India pic.twitter.com/aslojtuoUN
— Dr. Narayana Gowda / ಡಾ.ನಾರಾಯಣ ಗೌಡ (@narayanagowdakc) July 24, 2021
ಭಾರತಕ್ಕೆ ಮೊದಲ ಪದಕ ಸಂಭ್ರಮ:
49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 26 ವರ್ಷದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿ ಕೊಟ್ಟಿದ್ದಾರೆ. ಚೀನಾದ ಹೊ ಜಿಹೂಹು ಒಟ್ಟು 210 ಕೆಜಿ (94+116 ಕೆಜಿ) ಭಾರ ಎತ್ತಿ ಚಿನ್ನದ ಪದಕ ಬೇಟೆಯಾಡಿದರೆ, ಮೀರಾಬಾಯಿ ಚಾನು 202 ಕೆಜಿ (87+115 ಕೆಜಿ) ಭಾರ ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇಂಡೋನೇಷ್ಯಾದ ಐಸಾಹ್ ವಿಂಡಿ ಕಾಂಟಿಕಾ ವಿಂಡಿ 194 ಕೆಜಿ (84+110ಕೆಜಿ) ಕಂಚಿನ ಪದಕ ಪಡೆದರು.
#WATCH | Manipur: Family and neighbours of weightlifter Mirabai Chanu burst into celebrations as they watch her win the #Silver medal for India in Women's 49kg category. #OlympicGames pic.twitter.com/F2CjdwpPDc
— ANI (@ANI) July 24, 2021
84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ ಜಿಹೂಹು 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಇದು ಒಲಿಂಪಿಕ್ಸ್ ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. 69 ಕೆಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗಳಿಸಿದ್ದರು.