– ಖಾಸಗಿ ಶಾಲೆಗಳ ಲಾಬಿಗೆ ನಾನು ಬಗ್ಗುವುದಿಲ್ಲ
ಬಳ್ಳಾರಿ: ನನ್ನ ತಾಯಿಯ ಋಣ ತೀರಸಬೇಕಿದೆ. ಯಾಕೆಂದರೆ ಆಕೆ ಶಿಕ್ಷಕಿಯಾಗಿದ್ದಳು. ಆಕೆಯ ಋಣಭಾರದಿಂದ ಇಲ್ಲಿ ಕುಳಿತ್ತಿದ್ದೇನೆ. ಹೀಗಾಗಿ ಖಾಸಗಿ ಶಾಲೆಗಳ ಲಾಬಿಗೆ ಬಗ್ಗುವಂತಹ ಮನಸ್ಥಿತಿ ಇದೂವರೆಗೂ ನನಗೆ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿಂದು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪೂರ್ವ ಸಿದ್ಧತೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಶಿಕ್ಷಣ ಇಲಾಖೆ ರಾಜ್ಯ ಸರ್ಕಾರ ಕೊಟ್ಟಿರುವುದು ಋಣವನ್ನು ತೀರಿಸೋಕೆ ಒಂದು ಅವಕಾಶ. ಯಾಕೆಂದರೆ ನನ್ನ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದು, ಆಕೆಯ ಋಣದಿಂದಲೇ ನಾನು ಇಲ್ಲಿ ಕುಳಿತುಕೊಳ್ಳುವ ಅರ್ಹತೆ ಹೊಂದಿರುವೆ ಎಂದರು.
Advertisement
Advertisement
ನನಗೆ ಖಾಸಗಿ ಶಾಲೆಗಳ ಲಾಬಿಯಾಗಲಿ, ಶೂ ಲಾಬಿಯಾಗಲಿ, ಬುಕ್ ಲಾಬಿಯಾಗಲಿ ಹಾಗೂ ಬ್ಯಾಗ್ ಲಾಬಿಯಾಗಲೀ ಇನ್ನೂ ಯಾವುದೇ ಲಾಬಿಗೆ ಬಗ್ಗುವಂತಹ ಮನಸ್ಥಿತಿ ದೇವರ ದಯೆಯಿಂದ ಬಂದಿಲ್ಲ. ಈ ಲಾಕ್‍ಡೌನ್ ನಿಂದಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದೂಡಲಾಯಿತು. ಕೇಂದ್ರ ಗೃಹ ಸಚಿವಾಲಯ ಸಮ್ಮತಿ ನೀಡಿದ ಹಿನ್ನೆಲೆಯಲ್ಲಿ ಇದೀಗ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು.
Advertisement
Advertisement
ಹೈಕೋರ್ಟಿನಲ್ಲಿ ಪಿಐಎಲ್ ಸಹ ಇತ್ಯರ್ಥ ಆಗಿದೆ. ಹೈಕೋರ್ಟಿಗೂ ಸಹ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಮಕ್ಕಳ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ ನೀಡಲಾಗುತ್ತೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಸಲು ನಿರ್ಧರಿಸಲಾಗಿದೆ. ಎರಡು ಡೆಸ್ಕ್‍ಗಳ ನಡುವೆ 3 ಅಡಿ ಅಂತರ ಕಾಯ್ದುಕೊಳ್ಳಲಾಗುವುದು. ಪ್ರತಿ ಮಗು ಮಾಸ್ಕ್ ಹಾಕಿಕೊಂಡು ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಲು ಈಗಾಗಲೇ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರತಿ ಕೊಠಡಿಯಲ್ಲಿ 18-24 ಮಕ್ಕಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮಗುವಿಗೆ, ಪ್ರತಿ ದಿನ ಆರೋಗ್ಯ ತಪಾಸಣೆ ಮಾಡಲಾಗುವುದು. ಜ್ವರ, ಕೆಮ್ಮು-ನೆಗಡಿ ಇದ್ದ ಮಕ್ಕಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗುವುದು. ಪ್ರತಿ ಮಗುವಿಗೆ ಸ್ಯಾನಿಟೈಜರ್ ಮಾಡುವುದು ಕಡ್ಡಾಯ. ಮಗು ಕೊಠಡಿ ಪ್ರವೇಶ ಮಾಡುವಾಗಲೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳ ಲಾಗುವುದು. ಮಕ್ಕಳ ಜೊತೆಯಲ್ಲಿ ಪಾಲಕರು ಗುಂಪುಗುಂಪಾಗಿ ಬರದಂತೆ ಮನವಿ ಮಾಡಿದ್ದಾರೆ.