-SIT ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಯುವತಿ
-SIT ಯಾರ ಪರ? ಯುವತಿ ಪ್ರಶ್ನೆ
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ವೀಡಿಯೋಯಲ್ಲಿ ಕಾಣಿಸಿಕೊಂಡ ಎನ್ನಲಾದ ಯುವತಿ ಎರಡನೇ ವೀಡಿಯೋ ಹೇಳಿಕೆ ಬಿಡುಗಡೆಯಾಗಿದೆ. ತಂದೆ-ತಾಯಿಯ ಸುರಕ್ಷತೆ ಮುಖ್ಯ. ಹಾಗಾಗಿ ಪೋಷಕರಿಗೆ ರಕ್ಷಣೆ ನೀಡಬೇಕೆಂದು ವೀಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಏನಿದೆ ವೀಡಿಯೋದಲ್ಲಿದೆ?: ನಮ್ಮ ಅಪ್ಪ, ಅಮ್ಮ ಸ್ವಇಚ್ಛೆಯಿಂದ ದೂರು ನೀಡಿಲ್ಲ ಅನ್ನೋದು ನನಗೆ ನೂರಕ್ಕೆ ನೂರರಷ್ಟು ಗೊತ್ತು. ಮಗಳು ತಪ್ಪು ಮಾಡಿಲ್ಲ ಅನ್ನೋದು ಪೋಷಕರಿಗೆ ಗೊತ್ತಿದೆ. ನನಗೆ ಅಪ್ಪ, ಅಮ್ಮನ ಸುರಕ್ಷತೆ ಮುಖ್ಯ. ಅವರು ಸೇಫ್ ಆಗಿದ್ದರೆ ಅನ್ನೋದು ಖಾತ್ರಿಯಾದಾಗ ಎಸ್‍ಐಟಿ ಮುಂದೆ ಬಂದು ಹೇಳಿಕೆ ದಾಖಲಿಸುತ್ತೇನೆ.
ಎಸ್‍ಐಟಿ ಯಾರ ಪರ?: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಮತ್ತು ಮಹಿಳಾ ಸಂಘಟನೆಗಳು ನಮ್ಮ ತಂದೆ-ತಾಯಿಗೆ ರಕ್ಷಣೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ನನಗೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇದೆ. ನಾನು ಮಾರ್ಚ್ 12 ರಂದು ವೀಡಿಯೋ ಹೇಳಿಕೆಯನ್ನ ಎಸ್‍ಐಟಿಗೆ ನೀಡಿದ್ದೆ. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ಅವರು ದೂರು ದಾಖಲಿಸಿದ ಅರ್ಧ ಗಂಟೆಯಲ್ಲಿ ನನ್ನ ವೀಡಿಯೋ ಹೊರಗೆ ಬಿಡುತ್ತಾರೆ. ಎಸ್‍ಐಟಿ ಯಾರ ಪರ ಕೆಲಸ ಮಾಡುತ್ತಿದ್ದಾರೆ ಅನ್ನೋದು ಅರ್ಥ ಆಗ್ತಿಲ್ಲ. ಅಧಿಕಾರಿಗಳು ಯಾರನ್ನ ಸೇಫ್ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಎಸ್‍ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.