ನನ್ನ ಜೀವನದಲ್ಲಿ ಮೇ 22, 23 ಈ ಎರಡು ದಿನವನ್ನ ಮರೆಯಲು ಸಾಧ್ಯವಿಲ್ಲ: ನಾಗಾರ್ಜುನ

Public TV
1 Min Read
nagarjuna 2

ಹೈದರಾಬಾದ್: ಟಾಲಿವುಡ್ ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ತಮ್ಮ ಜೀವನದ ಎರಡು ವಿಶೇಷ ದಿನಗಳು ಯಾವುದೆಂದು ತಿಳಿಸಿದ್ದಾರೆ.

ನಟ ನಾಗಾರ್ಜುನ ತಮ್ಮ ಜೀವನದ ಎರಡು ವಿಶೇಷ ದಿನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. “ನನ್ನ ಜೀವನದಲ್ಲಿ ಮೇ 22 ಮತ್ತು ಮೇ 23 ಈ ಎರಡು ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ‘ಅನ್ನಮಯ್ಯ’ ಮತ್ತು ‘ಮನಂ’ ಎರಡೂ ಮರೆಯಲಾಗದ ಸಿನಿಮಾಗಳು ತೆರೆಗೆ ಬಂದ ದಿನ” ಎಂದು ಟ್ವೀಟ್ ಮಾಡಿದ್ದಾರೆ.

nagarjuna

ಜೊತೆಗೆ ಎರಡೂ ಸಿನಿಮಾಗಳ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಮೇ 22 ನಾಗಾರ್ಜುನ ಅಭಿನಯದ ‘ಅನ್ನಮಯ್ಯ’ ಸಿನಿಮಾ ರಿಲೀಸ್ ಆದ ದಿನ. ಇನ್ನೂ ಮೇ 23 ‘ಮನಂ’ ಸಿನಿಮಾ ತೆರೆಗೆ ಬಂದ ದಿನವಾಗಿದೆ. ಹೀಗಾಗಿ ಈ ಎರಡು ದಿನಗಳು ನಾಗಾರ್ಜುನ ಅವರಿಗೆ ಯಾವಾಗಲು ವಿಶೇಷವಾಗಿರುತ್ತವೆ.

1997ರಲ್ಲಿ ‘ಅನ್ನಮಯ್ಯ’ ಸಿನಿಮಾ ತೆರೆಗೆ ಬಂದಿದ್ದು, ಸಕ್ಸಸ್ ಕಂಡಿತ್ತು. ‘ಅನ್ನಮಯ್ಯ’ ಭಕ್ತಿ ಪ್ರಧಾನ ಸಿನಿಮಾವಾಗಿದ್ದು, ನಾಗಾರ್ಜುನ ಸಿನಿಮಾದಲ್ಲಿ ಅನ್ನಮಯ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Rusthum 2 Nagarjuna

ಇನ್ನೂ ‘ಮನಂ ಸಿನಿಮಾ 2014ರಲ್ಲಿ ತೆರೆಗೆ ಬಂದಿದೆ. ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ವಿಶೇಷ ಅಂದರೆ ಈ ಸಿನಿಮದಲ್ಲಿ ನಾಗಾರ್ಜುನ ಕುಟುಂಬದ ಎಲ್ಲರೂ ಅಭಿನಯಿಸಿದ್ದಾರೆ. ಅಕ್ಕಿನೇನಿ ನಾಗೇಶ್ವರ ರಾವ್, ಪುತ್ರ ನಾಗಾರ್ಜುನ, ಮೊಮ್ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ಎಲ್ಲರೂ ಈ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ. ಹೀಗಾಗಿ ನಾಗಾರ್ಜುನ ಅವರಿಗೆ ಈ ಸಿನಿಮಾ ತುಂಬಾ ವಿಶೇಷವಾಗಿದೆ.

Share This Article