ನವದೆಹಲಿ: ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಆಡಳಿತ ಸರ್ಕಾರ ತೆಗೆದುಕೊಳ್ಳುತ್ತಿರುವ ನಿಲುವಿನ ಕುರಿತಾಗಿ ಟ್ವೀಟ್ ಮಾಡುತ್ತಾ ಜಾಗೃತಿ, ಎಚ್ಚರಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ನನ್ನನ್ನು ಬಂಧಿಸಿ ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿಯ ಕೆಲವು ಗೇಡೆಗಳ ಮೇಲೆ ಮೋದಿ ವಿರುದ್ದ ಗೋಡೆ ಬರಹಗಳನ್ನು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ದೆಹಲಿ ಪೊಲೀಸರು 17 ಜನರನ್ನು ಬಂಧಿಸಿ ಅವರ ವಿರುದ್ಧವಾಗಿ 21 ಕೇಸ್‍ಗಳನ್ನು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಇಂತಹ ಒಂದು ಟ್ವೀಟ್ ಮಾಡಿದ್ದಾರೆ.
Arrest me too.
मुझे भी गिरफ़्तार करो। pic.twitter.com/eZWp2NYysZ
— Rahul Gandhi (@RahulGandhi) May 16, 2021
ದೆಹಲಿ ನಗರದ ಗೋಡೆಗಳ ಮೇಲೆ .. ಮೋದಿ ಜೀ ನಮ್ಮ ಮಕ್ಕಳ ಲಸಿಕೆಗಳನ್ನು ವಿದೇಶಗಳಿಗೆ ಯಾಕೆ ಕಳುಹಿಸಿದ್ರಿ..?ಎಂಬ ಗೋಡೆಬರಗಳನ್ನ ಬರೆಯಲಾಗಿತ್ತು. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ನಡೆಯ ವಿರುದ್ಧ ಆಕ್ರೋಶ ಹೊರಹಾಕಿರೋ ರಾಹುಲ್ ಗಾಂಧಿ ಮೋದಿ ಜೀ ನಮ್ಮ ಮಕ್ಕಳ ಲಸಿಕೆಗಳನ್ನ ವಿದೇಶಗಳಿಗೆ ಯಾಕೆ ಕಳುಹಿಸಿದ್ರಿ..? ಎಂಬ ಬರಹವಿರುವ ಫೋಟೋವನ್ನು ಹಂಚಿಕೊಂಡು ನನ್ನನ್ನು ಬಂಧಿಸಿ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್‍ನ ಅಧಿಕೃತ ಟ್ವೀಟ್ಟರ್ ಖಾತೆ ಪ್ರೋಫೈಲ್ ಫೋಟೋವನ್ನಾಗಿ ಇದೆ ಬರಹವಿರುವ ಫೋಟೋವನ್ನು ಬದಲಿಸಿಕೊಂಡಿದೆ.