– ಮಹಾನಾಯಕನಿಂದ ಈ ಷಡ್ಯಂತ್ರ
– ಕಾಂಗ್ರೆಸ್, ಜೆಡಿಎಸ್ ನಲ್ಲಿ ನನಗೆ ಶತ್ರುಗಳಿಲ್ಲ
ಬೆಂಗಳೂರು: ಸಿಡಿ ವಿಷಯವಾಗಿ ನನಗೇನೂ ಗೊತ್ತಿಲ್ಲ. ನನ್ನ ವಿರುದ್ಧ ವ್ಯವಸ್ಥಿತವಾಗಿ ಪಿತೂರಿ ಮಾಡಲಾಗಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ತುಂಬಾ ದುಃಖದಲ್ಲಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಧ್ಯಮಗಳ ಮುಂದೆ ಭಾವುಕರಾದರು.
ಸಿಡಿ ಕೇಸ್ ಪ್ರಕರಣದ ಬೆಳಕಿಗೆ ಬಂದ ಮರುದಿನದಿಂದ ಅಜ್ಞಾತ ಸ್ಥಳದಲ್ಲಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ಘಟನೆ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೇವೆ. ಯಶವಂತಪುರ ಮತ್ತು ಹುಳಿಮಾವಿನಲ್ಲಿ ಸಿಡಿ ಬಗ್ಗೆ ಪ್ಲಾನ್ ಮಾಡಲಾಗಿದೆ. ನಾಲ್ಕು ಮತ್ತು ಐದನೇ ಫ್ಲೋರ್ ನಲ್ಲಿ ಮೀಟಿಂಗ್ ನಡೆದಿದೆ ಎಂದು ಮಾತ್ರ ಹೇಳಬಲ್ಲೆ. ಓರ್ವ ಮಹಾನಾಯಕ ಈ ಷಡ್ಯಂತ್ರ ಹಿಂದಿದ್ದಾನೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ನನಗೆ ಯಾವ ಶತ್ರುಗಳಿಲ್ಲ. ಸಿಡಿ ಹಿಂದೆ ಇರುವ ಇಬ್ಬರ ನಾಯಕರಿದ್ದಾರೆ. ಸಮಯ ಬಂದಾಗ ಅವರಿಬ್ಬರ ಹೆಸರನ್ನ ಬಹಿರಂಗಗೊಳಿಸುತ್ತದೆ. ನಾನು ಅಪರಾಧಿಯಲ್ಲ, ನಿರಪರಾದಿ. ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ ನನಗೆ ನೈತಿಕ ಬೆಂಬಲ ನೀಡಿದ್ದಾರೆ. ನನ್ನ ರಾಜಕೀಯ ಜೀವನ ಅಂತ್ಯಗೊಳಿಸಲು ಸಂಚು ರೂಪಿಸಲಾಗಿದೆ. ಈ ವಿಷಯದಲ್ಲಿ ಸೋದರ ಬಾಲಚಂದ್ರ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.