ಬೆಂಗಳೂರು: ಬೆಳಗ್ಗೆ ಸಡನ್ ಆಗಿ ಫೋನ್ ಬಂತು. ಆ ಸುದ್ದಿಯೊಂದಿಗೆ ನಾನು ಎದ್ದು ಬಂದೆ. ಮನೆಯವರನ್ನೇ ಕಳೆದುಕೊಂಡಿರೋ ಭಾವ ಉಂಟಾಗುತ್ತಿದೆ ಎಂದು ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಅವರು ಪತ್ರಕರ್ತ ರವಿ ಬೆಳಗೆರೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ದೀಪಿಕಾ ದಾಸ್, ಪ್ರತಿಯೊಂದು ಅಂಶವನ್ನು ಅವರು ನೆನಪಿಟ್ಟುಕೊಳ್ಳುತ್ತಿದ್ದರು. ಅವರನ್ನು ನೋಡಿದರೆ ಅನಾರೋಗ್ಯವಿತ್ತು ಎಂದು ಕಾಣುತ್ತಿತ್ತು. ಆದರೆ ನಾನು ಇನ್ನು ತುಂಬಾ ವರ್ಷ ಬದುಕುತ್ತೇನೆ ಎಂದು ಹೇಳುತ್ತಿದ್ದರು. ಆದರೆ ಈಗ ನನಗೆ ಅವರ ಬಗ್ಗೆ ಮಾತನಾಡಲು ಕೂಡ ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ರು: ರವಿ ಪುತ್ರ ಕಣ್ಣೀರು
ಅವರನ್ನು ಬಿಗ್‍ಬಾಸ್ ಮನೆಯಿಂದ ಹೊರಗಡೆ ಕಳುಹಿಸಿಕೊಳ್ಳಲು ಇಷ್ಟವಿರಲಿಲ್ಲ. ಆದರೆ ಈಗ ಅವರು ಪ್ರಪಂಚದಿಂದಲೇ ದೂರ ಹೋಗಿದ್ದಾರೆ. ಬಿಗ್‍ಬಾಸ್‍ನಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೂ ಅವರು ತಂದೆಯಾಗಿ ಮಾರ್ಗದರ್ಶನ ನೀಡಿದ್ದರು. ಅವರ ಜೀವನ ಸಾಕಷ್ಟು ವಿಚಾರ, ತಾಯಿ, ಬರವಣಿಗೆ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಅವರು ಹೇಳುತ್ತಿದ್ದ ಪ್ರತಿಯೊಂದು ಮಾತು ಕೂಡ ನನಗೆ ನೆನಪಿದೆ. ಈಗ ಎಲ್ಲವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್