ಬೆಂಗಳೂರು: ನೀವು ನನ್ನಜೀವನದಲ್ಲಿ ದೇವರಾಗಿ ಬಂದಿದ್ದರಿ. ನೀವು ನನಗೆ ವರಗಳನ್ನು ಕೊಡುವ ದೇವರಾಗಿ ಇದ್ದೀರಿ ಎಂದು ಪತಿಯನ್ನು ನೆನೆದು ಸ್ಯಾಂಡಲ್‍ವುಡ್ ನಟಿ ಮಾಲಾಶ್ರೀ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಯಾಂಡಲ್‍ವುಡ್‍ನ ಕೋಟಿ ನಿರ್ಮಾಪಕರಾದ ರಾಮು ಕೊರೊನಾದಿಂದ ಮೃತಪಟ್ಟಿದ್ದರು. ಇಂದು ಅವರ ಹುಟ್ಟು ಹಬ್ಬ ಇರುವುದರಿಂದ ಮಾಲಾಶ್ರೀ ಪತಿಯನ್ನು ನೆನೆದು ಕೆಲವು ಸಾಲುಗಳನ್ನು ಬರೆದುಕೊಂಡು ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: 1986 ಜೂನ್ 19 ನನ್ನ ಜೀವನದ ಬಹುಮುಖ್ಯ ದಿನ- ನಟಿ ಸುಧಾರಾಣಿ
ನನ್ನ ದಿನ ನೀವಾಗಿದ್ರಿ, ನನ್ನ ಕಡೆ ನೀವಾಗಿದ್ರಿ, ನನ್ನ ನುಡಿ, ನಗು, ನೆಮ್ಮದಿ, ನನ್ನ ಹೆಸರಿಗೆ ಬೆಳಕು ನೀವಾಗಿದ್ರಿ. ದಿನ ರಾತ್ರಿ ಆಗುಹೋಗುಗಳನ್ನು ಆಲಿಸಿ ನನಗೆ ಬುದ್ದಿ ಹೇಳಿ ಬದುಕಿನ ಬುನಾದಿಯನ್ನು ಕಟ್ಟಿಕೊಟ್ಟ ಗುರುಗಳು ನೀವಾಗಿದ್ರಿ. ಮಕ್ಕಳ ಜೀವನವನ್ನು ಹಸನಾಗಿರೂಪಿಸುವ ತಂದೆ ನೀವಾಗಿದ್ರಿ ಎಂದು ಬರೆದುಕೊಂಡು ಪತಿಯನ್ನು ನೆನಪಿಸಿಕೊಂಡಿದ್ದಾರೆ.
View this post on Instagram
ನೀವು ತುಂಬಾ ವಿಭಿನ್ನವಾದ ಆಲೋಚನೆಯನ್ನು ಉಳ್ಳವರು.ಕಾಳಜಿ, ಡೆಡಿಕೇಟೆಡ್ ಆಗಿದ್ದಿವರು ನೀವು. ನೀವುದೂರವಾದ ಆಕ್ಷಣ ಮತ್ತು ಈ ಸಾಲುಗಳನ್ನು ಬರೆಯುವ ಈ ಕ್ಷಣ ಕಣ್ಣಲ್ಲಿ ನೀರು ಹೆಪ್ಪುಗಟ್ಟಿ ಕಣ್ಣೆರಡು ಮಂಜಾಗುತ್ತಿದೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನನಗಾಗೆ ಜನುಮ ಪಡೆದು ಬಂದ ಹೃದಯ ನೀವು. ನನಗೆ ಏನೇನು ಬೇಕೋ ಅದಲ್ಲ ಕೊಟ್ಟ ನಿಮಗೆ ಇಡೀ ಸ್ವರ್ಗ ನಿಮ್ಮದಾಗಿರಲಿ ಅಂತ ಇವತ್ತು ಇಲ್ಲಿಂದಲೇ ಹಾರೈಕೆ ಮಾಡುತ್ತೇನೆ. ನಾನು ಯಾವಾಗಲು ತುಂಬಾ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸ್ಯಾಂಡಲ್‍ವುಡ್ ನಿರ್ಮಾಪಕರಾಗಿ ಹೆಸರುವಾಸಿಯಾಗಿದ್ದ ರಾಮು ಅವರು ಉಸಿರಾಟದ ತೊಂದರೆಯಿಂದಾಗಿ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಎಪ್ರಿಲ್ 26ರಂದು ಮರಣ ಹೊಂದಿದ್ದರು. ವಿಶೇಷವಾಗಿ ಸಾಹಸ ದೃಶ್ಯಗಳಿಗೆ ದುಬಾರಿ ಹಣವನ್ನು ಖರ್ಚು ಮಾಡುತ್ತಿದ್ದರು. ದುಬಾರಿ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಕಾರಣ ಸ್ಯಾಂಡಲ್‍ವುಡ್‍ನಲ್ಲಿ ಕೋಟಿ ರಾಮು ಎಂದೇ ಹೆಸರುವಾಸಿಯಾಗಿದ್ದರು.