ನನಗೆ ಚಪ್ಪಲಿಯಲ್ಲಿ ಹೊಡಿಯಿರಿ ಅಂದಿದ್ಯಾಕೆ ಚಂದ್ರಚೂಡ ?

Public TV
2 Min Read
CHAKRAWARTHI CHANDRACHUDA

ಬೆಂಗಳೂರು: ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟು ಸದಾ ಮನೆಯಲ್ಲಿ ಒಂದಲ್ಲ ಒಂದು ಕಿರಿಕ್ ಮಾಡುವ ಚಕ್ರವರ್ತಿ ಚಂದ್ರಚೂಡ ಇದೀಗ ಬಿಗ್ ಮನೆಯ ಸ್ಪರ್ಧಿಗಳಲ್ಲಿ ನನಗೆ ಚಪ್ಪಲಿಯಲ್ಲಿ ಹೊಡಿಯಿರಿ ಎನ್ನುವ ಮೂಲಕ ಮನೆಯವರೆಲ್ಲರಿಗೂ ಪಂಥಾಹ್ವಾನ ನೀಡಿದ್ದಾರೆ.

CHAKRAWARTHI 1

ಬಿಗ್‍ಬಾಸ್ ನೀಡಿದ ಟಾಸ್ಕ್ ಒಂದನ್ನು ಮಂಜು, ಅರವಿಂದ್ ಮತ್ತು ರಾಜೀವ್ ಅವರು ಮಾಡಿದರು. ಇದರ ಕುರಿತು ಮಾತಿಗಿಳಿದ ಚಕ್ರವರ್ತಿ ಬಿಗ್‍ಮನೆಯಲ್ಲಿ ಟಾಸ್ಕ್ ಕೊಟ್ಟಾಗ ನಾವು ಆಟ ಆಡಿ ತೋರಿಸುತ್ತೇವೆ ಎಂದಾಗ ಕೆಲವರು ಈ ಆಟವನ್ನು ಇಂತವರೇ ಆಡಲಿ ಎಂದು ಬೊಟ್ಟು ಮಾಡುತ್ತಾರೆ. ನಾವು ಆಟವಾಡಲು ಸಿದ್ಧರಾದರೆ. ಬೇಡ ಎಂದು ಹೇಳುತ್ತಾರೆ. ಅಂತವರ ವಿರುದ್ಧ ನಾನು ಧ್ವನಿ ಎತ್ತುತ್ತೇನೆ ಆದರೆ ನನ್ನಿಂದ ಮನೆಯಲ್ಲಿ ಜಗಳವಾಗುವುದು ಬೇಡ ಎಂದು ಸುಮ್ಮನಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

BIGG BOSS 21

ಇದನ್ನು ಕೇಳಿಸಿಕೊಂಡ ಮಂಜು, ಅರವಿಂದ್ ಮತ್ತು ರಾಜೀವ್ ನೀವು ಆಟ ಆಡಬಾರದು ಎಂದು ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ ನಾನು ಆಟವಾಡಲು ಹೊರಟಾಗ ನಿಧಿ ಅವರು ರಾಜೀವ್ ಅವರು ಆಟವಾಡಲಿ. ನೀವು ಆಟವಾಡುವುದು ಬೇಡ ಎಂದಿದ್ದರು ಎಂದರು. ಇದಕ್ಕೆ ಗರಂ ಆದ ನಿಧಿ ಎಲ್ಲದಕ್ಕೂ ನನ್ನ ಹೆಸರನ್ನು ತೆಗೆದುಕೊಳ್ಳಬೇಡಿ ನಾನು ನೀವು ಆಡಬಾರದು ಎಂದು ಹೇಳಿಲ್ಲ ಎಂದರು.

NIDI

ನಂತರ ಚಕ್ರವರ್ತಿ ನಾನು ಆಡುತ್ತೇನೆ ಎಂದು ಕೈ ಎತ್ತಿದಾಗ ಬೇಡ ರಾಜೀವ್ ಆಡಲಿ ಎಂದು ನಿಧಿ ಹೇಳಿದ್ದು ಕೇಳಿಸಿಕೊಂಡಿದ್ದೇನೆ ಎಂದರು. ನಂತರ ಮಾತಿನ ಚಕಮಕಿ ಜೋರಾಗಿ ಚಕ್ರವರ್ತಿ ನಾನು ರಘು, ಸಂಬರಗಿ ಮತ್ತು ಶಮಂತ್ ಜೊತೆಗಿದ್ದೆ ಆ ಸಂದರ್ಭ ನಾನು ನಿಧಿ ಅವರ ಬಗ್ಗೆ ಮಾತನಾಡಿದ್ದೆ ಎಂದು ಅವರು ಹೇಳಿದರೆ ನನಗೆ ನೀವು ಚಪ್ಪಲಿಯಲ್ಲಿ ಹೊಡಿಯಿರಿ ಎಂದರು.

ನಂತರ ಮಾತು ಮುಂದುವರಿಸಿದ ನಿಧಿ ಚಕ್ರವರ್ತಿ ಅವರು ಯಾಕೆ ಸುಮ್ಮನೆ ನನ್ನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಕಾರಾರು ಎತ್ತಿದರು. ಸದಾ ಒಂದಲ್ಲ ಒಂದು ವಿಷಯಗಳನ್ನು ಹಿಡಿದುಕೊಂಡು ರೆಬಲ್ ಆಗುವ ಚಕ್ರವರ್ತಿ ಇದೀಗ ನಿಧಿ ಮೇಲೆ ಆಟದ ವಿಷಯವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇನೆ ಎನ್ನುವ ಮೂಲಕ ಮಾತಿನೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *