ಬಳ್ಳಾರಿ: ನನಗೆ ಇದೇ ಖಾತೆ ಬೇಕು ಅಂಥಾ ಕೇಳುವುದು ನನ್ನ ಧರ್ಮವಾಗಿದೆ. ಆದರೆ ಅದೇ ಖಾತೆ ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಸಚಿವ ಆನಂದ್ ಸಿಂಗ್ ಬಳ್ಳಾರಿಯಲ್ಲಿ ಹೇಳಿದ್ದಾರೆ.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಬಳ್ಳಾರಿಗೆ ಆಗಮಿಸಿದ್ದರು. ಬಳ್ಳಾರಿಯ ಶಕ್ತಿ ದೇವತೆ ಕನಕದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ನನಗೆ ಇದೇ ಖಾತೆ ಬೇಕು ಎಂದು ಮನವಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಮನವಿ ಮಾಡಿಕೊಂಡಿದ್ದೇನೆ. ಅವರು ನೀಡಿದರೆ ಸಮರ್ಥವಾಗಿ ನಿರ್ವಹಿಸುವೆ ಎಂದಿದ್ದಾರೆ.
- Advertisement3
- Advertisement
ಖಾತೆ ಕೊಡುವುದು ಬಿಡೋದು ಅವರಿಗೆ ಬಿಟ್ಟಿದ್ದು. ಅವರು ಯಾವ ಖಾತೆಯನ್ನಾದರೂ ನೀಡಲಿ ಸಮರ್ಥವಾಗಿ ನಿಭಾಯಿಸುವೆ. ನನಗಿಷ್ಟವಾದ ಖಾತೆಯನ್ನ ನೀಡಿದರೆ ಮತ್ತಷ್ಟು ಪ್ರಭಲವಾಗಿ ನಿಭಾಯಿಸುವೆ. ಸದ್ಯದ ಮಟ್ಟಿಗೆ ಆಯಾ ಜಿಲ್ಲೆಗಳ ಕೋವಿಡ್ ನಿರ್ವಹಣೆಗೋಸ್ಕರ ಕೆಲ ಸಚಿವರಿಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ನನಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಿಗೋದು ಬಹುತೇಕ ಖಚಿತವಾಗಿದೆ ಎಂದು ತಿಳಿಸಿದ್ದಾರೆ.