-ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಂಚಲನ
ಬೆಂಗಳೂರು: ಮಹಿಳೆಯರಿಬ್ಬರು ನಡು ರಸ್ತೆಯಲ್ಲಿ ಬಿಂದಾಸ್ ಆಗಿ ಹೆಜ್ಜೆ ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ಗಾಯಕಿ ಆಶಾ ಬೋಸ್ಲೆ ಹಾಡಿರುವ ‘ಪಿಯಾ ತು ಅಬ್ ತೋ ಆಜಾ’ ಹಾಡಿಗೆ ಮಹಿಳೆಯರು ಹೆಜ್ಜೆ ಹಾಕಿದ್ದಾರೆ. ಕೇವಲ 15 ಸೆಕೆಂಡ್ ವಿಡಿಯೋ ಕ್ಲಿಪ್ ನೋಡಿದ ನೆಟ್ಟಿಗರು, ಇಬ್ಬರ ಡ್ಯಾನ್ಸ್‍ಗೆ ಫಿದಾ ಆಗಿದ್ದಾರೆ. ವಿಡಿಯೋದಲ್ಲಿ ಮಹಿಳೆಯರ ಜೊತೆ ಓರ್ವ ವ್ಯಕ್ತಿ ಹೆಜ್ಜೆ ಹಾಕಿ ಹಿಂದೆ ಸರಿದಿರೋದನ್ನ ಗಮನಿಸಬಹುದು. ಈ ವಿಡಿಯೋ ಎಲ್ಲಿಯದ್ದು ಮತ್ತು ಮಹಿಳೆಯರು ಯಾರು ಎಂಬುವುದು ತಿಳಿದು ಬಂದಿಲ್ಲ.
This is so cute☺️ pic.twitter.com/xDslL51Ob0
— Pathan ka Baccha (@peechetodekho) August 29, 2020
ಮಹಿಳೆಯರ ಡ್ಯಾನ್ಸ್ ವಿಡಿಯೋ 11 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. 1970ರಲ್ಲಿ ಬಿಡುಗಡೆಯಾದ ‘ಕಾರವಾನ್’ ಸಿನಿಮಾದಲ್ಲಿ ‘ಪಿಯಾ ತು ಅಬ್ ತೋ ಆಜಾ’ ಆರ್.ಡಿ. ಬರ್ಮನ್ ಸಂಯೋಜನೆಯಲ್ಲಿ ಮೂಡಿ ಬಂದಿತ್ತು. ಚಿತ್ರದಲ್ಲಿ ಜೀತೇಂದ್ರ ಮತ್ತು ಆಶಾ ಪಾರೇಖ್ ಜೊತೆಯಾಗಿ ನಟಿಸಿದ್ದರು.