– ಬೆಚ್ಚಿ ಬಿದ್ದ ಶಿವಮೊಗ್ಗದ ಜನತೆ
ಶಿವಮೊಗ್ಗ : ನಗರದಲ್ಲಿ ಮಚ್ಚು, ಲಾಂಗ್ ಗಳು ಸದ್ದು ಮಾಡಿವೆ. ಬಸವನಗುಡಿ ಬಡಾವಣೆಯಲ್ಲಿ ಹಾಡಹಗಲೇ ರೌಡಿಶೀಟರ್ ಒಬ್ಬನ ಹತ್ಯೆ ನಡೆದಿದೆ. ಕೊಲೆಯಾದವನನ್ನು ಮಂಜುನಾಥ್ ಭಂಡಾರಿ (30) ಎಂದು ಗುರುತಿಸಲಾಗಿದೆ.
ಶಿವಮೊಗ್ಗದ ಬಸವನಗುಡಿ ಬಡಾವಣೆಯಲ್ಲಿ ರಸ್ತೆಯಲಿ ಹೋಗುತ್ತಿದ್ದ ವೇಳೆ ರೌಡಿ ಶೀಟರ್ ಮಂಜುನಾಥ್ ಭಂಡಾರಿ ಮೇಲೆ ದಾಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಹಾಡಹಗಲೇ ನಡು ರಸ್ತೆಯಲ್ಲಿ ನಡೆದ ಕೊಲೆಯಿಂದಾಗಿ ಮಲೆನಾಡಿನ ಜನರು ಬೆಚ್ಚಿ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜ್ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಘಟನೆ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.