ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಅನಂತ್‍ನಾಗ್ ಅವರು 73ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ, ಚಿತ್ರರಂಗ ಸೇರಿದಂತೆ ಅಭಿಮಾನಿ ಬಳಗದಿಂದ ನಟನಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.
ಅಂತೆಯೇ ವೈದ್ಯಕೀಯ ಶಿಕರ್ಷಣ ಸಚಿವ ಡಾ. ಕೆ ಸುಧಾಕರ್ ಕೂಡ ಹಿರಿಯ ನಟನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಚಿವರು, ಕನ್ನಡ ಚಿತರಂಗದ ಹಿರಿಯ ನಟ, ಅಪ್ರತಿಮ ಕಲಾವಿದ ಅನಂತ್ ನಾಗ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಸಹಜ ಮತ್ತು ಮನೋಜ್ಞ ಅಭಿನಯದ ಮೂಲಕ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಅನಂತ್ ನಾಗ್ ಅವರಿಗೆ ದೇವರು ಉತ್ತಮ ಆಯುರಾರೋಗ್ಯ ನೀಡಿ ಇನ್ನಷ್ಟು ದೀರ್ಘಕಾಲ ಕಲಾಸೇವೆ ಮಾಡುವಂತಾಗಲಿ ಎಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕನ್ನಡ ಚಿತರಂಗದ ಹಿರಿಯ ನಟ, ಅಪ್ರತಿಮ ಕಲಾವಿದ ಶ್ರೀ ಅನಂತ್ ನಾಗ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಸಹಜ ಮತ್ತು ಮನೋಜ್ಞ ಅಭಿನಯದ ಮೂಲಕ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಅನಂತ್ ನಾಗ್ ಅವರಿಗೆ ದೇವರು ಉತ್ತಮ ಆಯುರಾರೋಗ್ಯ ನೀಡಿ ಇನ್ನಷ್ಟು ದೀರ್ಘಕಾಲ ಕಲಾಸೇವೆ ಮಾಡುವಂತಾಗಲಿ ಎಂದು ಆಶಿಸುತ್ತೇನೆ. pic.twitter.com/QVq9JBrbpw
— Dr Sudhakar K (@mla_sudhakar) September 4, 2020
ಈ ಹಿಂದೆ ಅನಂತ್ ನಾಗ್ ಅವರು ಕೆಜಿಎಫ್-1ರಲ್ಲಿ ನಿರೂಪಕನ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಕೆಜಿಎಫ್ ಚಾಪ್ಟರ್- 2 ರಲ್ಲಿ ನಟ ಪ್ರಕಾಶ್ ರಾಜ್ ಅವರ ಪಾತ್ರ ಹಿರಿಯ ನಟ ಅನಂತ್ ನಾಗ್ ಬದಲಿ ಎಂಬ ಗುಮಾನಿ ಹಬ್ಬಿತ್ತು. ಈ ಬಗ್ಗೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟನೆ ನೀಡಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಶಾಂತ್ ನೀಲ್, ಅನಂತ್ ನಾಗ್ ಬದಲಿಗೆ ಪ್ರಕಾಶ್ ರಾಜ್ ಬಂದಿಲ್ಲ ಮತ್ತು ಸಂಪೂರ್ಣವಾಗಿ ವಿಭಿನ್ನ ಪಾತ್ರವನ್ನು ನಿರ್ವಹಿಸಲು ಬೋರ್ಡ್ ಗೆ ಬಂದಿದ್ದಾರೆ. ಪ್ರಕಾಶ್ ರಾಜ್ ಖಂಡಿತವಾಗಿಯೂ ಅನಂತ್ ನಾಗ್ ಬದಲಿಯಲ್ಲ. ಅವರದ್ದು ಹೊಸ ಎಂಟ್ರಿ ಮತ್ತು ಇದು ಚಲನಚಿತ್ರದಲ್ಲಿ ಹೊಸ ಪಾತ್ರವಾಗಿದೆ ಎಂದು ಸ್ಪಷ್ಟಪಡಿಸಿದ್ದರು.