ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಂಸದರೊಬ್ಬರ ಮಗನ ಹೆಸರು ಕೇಳಿಬಂದಿದೆ.
ಹೌದು. ನಟಿ ಸಂಜನಾ ಆಪ್ತ ರಾಹುಲ್‌ನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತನ ಮೊಬೈಲ್‌ನಲ್ಲಿರುವ ವಿಡಿಯೋದಲ್ಲಿರುವ ಪಾರ್ಟಿಯಲ್ಲಿ ಮಾಜಿ ಸಂಸದನ ಪುತ್ರ ಭಾಗಿಯಾಗಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ವಿಡಿಯೋವನ್ನು ಇಟ್ಟುಕೊಂಡು ಮತ್ತಷ್ಟು ಪ್ರಶ್ನೆಗಳನ್ನು ರಾಹುಲ್‌ಗೆ ಕೇಳಿದಾಗ ವಾರಕ್ಕೊಮ್ಮೆ ನಾನು ಆತನ ಜೊತೆ ಮಾತನಾಡುತ್ತಿದ್ದೆಎಂದಿದ್ದಾನೆ. ಈಗ ಸಿಸಿಬಿ ಪೊಲೀಸರು ರಾಜಕಾರಣಿಯ ಪುತ್ರನ ಪಾತ್ರದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸತೊಡಗಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?
ರಾಹುಲ್‌ಗೆ ಈತ ಅಲ್ಲದೇ ಇನ್ನೂ ಹಲವು ರಾಜಕಾರಣಿಗಳ ಪುತ್ರರು ಸಂಪರ್ಕದಲ್ಲಿದ್ದಾರೆ. ರಾಹುಲ್‌ಗೆ ಶ್ರೀಲಂಕಾದ ಕ್ಯಾಸಿನೋಗಳ ಹಿಡಿತವಿದೆ. ಹೀಗಾಗಿಯೇ ರಾಜಕಾರಣಿಗಳ ಮಕ್ಕಳನ್ನು ಕ್ಯಾಸಿನೋಗೆ ಕಳುಹಿಸುತ್ತಿದ್ದ. ಕ್ಯಾಸಿನೋಗೆ ಕಳುಹಿಸಿಕೊಡುವ ಮೂಲಕ ರಾಜಕಾರಣಿಗಳ ಮಕ್ಕಳ ಸ್ನೇಹವನ್ನು ಸಂಪಾದಿಸುತ್ತಿದ್ದ. ಕ್ಯಾಸಿನೋಗಳಲ್ಲಿ ಪಾರ್ಟಿ ಆಯೋಜನೆ ಮಾಡಿ ಎಲ್ಲವನ್ನು ರಾಹುಲ್ ಒದಗಿಸಿಕೊಡುತ್ತಿದ್ದ.