ಬೆಂಗಳೂರು: ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಸ್ಯಾಂಡಲ್‍ವುಡ್‍ನ ನಟಿ ರಾಗಿಣಿಯವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಇಂದು ಸಿಸಿಬಿ ಪೊಲೀಸರು ರಾಗಿಣಿಯವರ ಆಪ್ತ ಜಯನಗರದ ಆರ್.ಟಿ.ಒ ಅಧಿಕಾರಿ ರವಿಶಂಕರ್ ನನ್ನು ಕಚೇರಿಗೆ ಕರೆತಂದು ವಿಚಾರಣೆ ಮಾಡಿ ವಶಕ್ಕೆಪಡೆದು ಬಂಧಿಸಿದ್ದಾರೆ. ಆತನ ವಿಚಾರಣೆಯ ನಂತರ ರಾಗಿಣಿಗೆ ನೋಟಿಸ್ ನೀಡಿದ್ದಾರೆ. ಜೊತೆಗೆ ನಾಳೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದನ್ನು ಓದಿ: ವಯಸ್ಸಿಗು ಡ್ರಗ್ಸ್‌ಗೂ ಕನೆಕ್ಟ್ ಮಾಡಬೇಡಿ: ನಟಿ ರಾಗಿಣಿ
Advertisement
ಗೆಳೆಯರ ಮಧ್ಯೆ ನಡೆದಿತ್ತು ಗಲಾಟೆ:
ಬೆಂಗಳೂರಿನ ಖಾಸಗಿ ಹೋಟೆಲ್ ರಿಟ್ಜ್ ಕಾರ್ಲ್ ಟನ್ ನಲ್ಲಿ ರಾಗಿಣಿ ಅವರ ಗೆಳೆಯರಾದ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್.ಟಿ.ಒ ಅಧಿಕಾರಿ ರವಿಶಂಕರ್ ಕಿತ್ತಾಡಿಕೊಂಡಿದ್ದರು. 2019ರ ಮಾರ್ಚ್ 16 ಶನಿವಾರ ರಾತ್ರಿ ಹೋಟೆಲ್ ನಲ್ಲಿ ಶಿವಪ್ರಕಾಶ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನಟಿ, ತಮ್ಮ ಗೆಳೆಯ ರವಿಶಂಕರ್ ಜೊತೆ ಹೋಟೆಲ್‍ಗೆ ತೆರಳಿದ್ದರು. ಇದನ್ನು ಕಂಡ ಶಿವಪ್ರಕಾಶ್, ರವಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಇಬ್ಬರ ನಡುವೆ ಆರಂಭವಾದ ಜಗಳ ತಾರಕಕ್ಕೇರಿ ಬಳಿಕ ಬಿಯರ್ ಬಾಟಲಿಯಿಂದ ಪರಸ್ಪರ ಬಡಿದಾಡಿಕೊಂಡಿದ್ದರು.
Advertisement
Advertisement
ಘಟನೆಯಿಂದ ಗಾಯಗೊಂಡ ಬಳಿಕ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಅಶೋಕ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದರು. ರವಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿ ಶಿವಪ್ರಕಾಶ್ ರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿತ್ತು. ಇವರಿಬ್ಬರು ರಾಗಿಣಿ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಆದರೆ ಈಗ ರಾಗಿಣಿ ಈ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಕ್ರಿಯಿಸಿದ್ದರು.
Advertisement
ಅಂದು ನಾನು ಸ್ನೇಹಿತರ ಜೊತೆ ಹೋಟೆಲಿನಲ್ಲೇ ಇದ್ದೆ. ಹಳೆ ವೈಷ್ಯಮ್ಯಕ್ಕೆ ಸಂಬಂಧಿಸಿದಂತೆ ರವಿ ಹಾಗೂ ಶಿವಕುಮಾರ್ ಮಧ್ಯೆ ಗಲಾಟೆ ನಡೆದಿತ್ತು. ಆಗ ನಾನು ಸ್ನೇಹಿತರೊಂದಿಗೆ ಅಲ್ಲೇ ಊಟ ಮಾಡುತ್ತಿದ್ದೆ. ಅವರಿಬ್ಬರ ಜಗಳದ ಮಧ್ಯೆ ನನ್ನ ಪಾತ್ರ ಏನೂ ಇಲ್ಲ. ಗಲಾಟೆ ಆದ ಬಳಿಕ ನಾನು ಅಲ್ಲಿಂದ ಹೊರಟು ಹೋದೆ. ಈ ಘಟನೆ ಬಗ್ಗೆ ನಾನು ಪೋಲೀಸರಿಗೆ ಹೇಳಿಕೆ ನೀಡಿದ್ದೇನೆ ಅಷ್ಟೇ ಎಂದು ರಾಗಿಣಿ ಸ್ಪಷ್ಟಪಡಿಸಿದ್ದರು.