ನಟಿಗೆ ನಿರ್ಮಾಪಕನಿಂದ ಚಾಕು ಇರಿತ

Public TV
1 Min Read
Malvi Malhotra

– ಮನೆಯಿಂದ ಹೊರಟ ನಟಿ ಮೇಲೆ ದಾಳಿ
– ತೆಲುಗು, ತಮಿಳು, ಹಿಂದಿ ಸಿನ್ಮಾಗಳಲ್ಲಿ ನಟನೆ

ಮುಂಬೈ: ನಟಿ ಮಾಳವಿ ಮಲ್ಹೋತ್ರಾ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ನಟಿಯನ್ನ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತನ್ನನ್ನು ನಿರ್ಮಾಪಕ ಅಂತ ಹೇಳಿಕೊಂಡಿರುವ ಯೋಗೇಶ್ ಹೆಸರಿನ ವ್ಯಕ್ತಿ ನಟಿಯ ಮೇಲೆ ಹಲ್ಲೆ ನಡೆಸಿದ್ದಾನೆ.

Malvi Malhotra 1

ಮಾಳವಿ ಮತ್ತು ಯೋಗೇಶ್ ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದರು. ಯೋಗೇಶ್ ಪ್ರೀತಿಯನ್ನ ನಟಿ ತಿರಸ್ಕರಿಸಿದ್ದರಿಂದ ಹಲ್ಲೆ ನಡೆಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು, ಪೊಲೀಸರು ಘಟನೆ ಸಂಬಂಧ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಟಿ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಯೋಗೇಶ್ ಮತ್ತು ಮಾಳವಿ ಮಧ್ಯೆ ಒಳ್ಳೆಯ ಸ್ನೇಹವಿತ್ತು ಎನ್ನಲಾಗಿದ್ದು, ಆದ್ರೆ ಯೋಗೇಶ್ ಒನ್‍ಸೈಡ್ ಲವ್ ನಲ್ಲಿದ್ದನು ಎಂದು ವರದಿಯಾಗಿದೆ.

Malvi Malhotra 2

ಮಾಳವಿ ಹೇಳಿದ್ದೇನು?:
ಆರೋಪಿ ಯೋಗೇಶ್ ಮತ್ತು ನನ್ನ ಪರಿಚಯ ಫೇಸ್‍ಬುಕ್ ನಲ್ಲಿ ಆಗಿತ್ತು. ತದನಂತರ ಕೆಲಸದ ವಿಷಯವಾಗಿ ಒಮ್ಮೆ ಕಾಫಿ ಕೆಫೆಯಲ್ಲಿ ಯೋಗೇಶ್ ನನ್ನು ಭೇಟಿಯಾಗಿದ್ದೇನೆ. ಸೋಮವಾರ ರಾತ್ರಿ ಮನೆಯಿಂದ ಹೊರಗೆ ಹೋಗುತ್ತಿರುವಾಗ ರಸ್ತೆಯಲ್ಲಿ ಯೋಗೇಶ್ ತನ್ನ ಆಡಿ ಕಾರ್ ನಿಲ್ಲಿಸಿಕೊಂಡು ನಿಂತಿದ್ದನು. ರಸ್ತೆ ಮಧ್ಯೆ ನನ್ನನ್ನು ತಡೆಯಲು ಯೋಗೇಶ್ ಮುಂದಾದಾಗ ನಾವು ವಿರೋಧಿಸಿದೆ. ಇದರಿಂದ ಕೋಪಗೊಂಡ ಯೋಗೇಶ್ ಚಾಕುವಿನಿಂದ ನಾಲ್ಕು ಬಾರಿ ಹಲ್ಲೆ ನಡೆಸಿದನು. ನಂತರ ಘಟನಾ ಸ್ಥಳದಿಂದ ಯೋಗೇಶ್ ಪರಾರಿಯಾದನು ಎಂದು ಮಾಳವಿ ಮಲ್ಹೋತ್ರಾ ದೂರು ಸಲ್ಲಿಸಿದ್ದಾರೆ.

Malvi Malhotra 4

ಕೊಲೆ ಯತ್ನದಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟಿಯ ಮೇಲೆ ಹಲ್ಲೆ ನಡೆದ ಸ್ಥಳದಲ್ಲಿನ ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದುಕೊಂಡು, ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯ ಎಲ್ಲ ದೃಶ್ಯಗಳು ಸೆರೆಯಾಗಿವೆ.

Malvi Malhotra 3

ಮೂಲತಃ ಹಿಮಾಚಲ ಪ್ರದೇಶದರಾಗಿರುವ ಮಾಳವಿ ಮಲ್ಹೋತ್ರಾ ಮುಂಬೈನಲ್ಲಿ ನೆಲೆಸಿದ್ದಾರೆ. ತೆಲುಗಿನ ಕುಮಾರಿ 21 ಎಫ್, ತಮಿಳು ಸಿನಿಮಾ ನದಿಕ್ಕೂ ಎಂಡಿ, ಹಿಂದಿಯ ಹೋಟೆಲ್ ಮಿಲನ್ ಮತ್ತು ಉಡಾನ್ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಗಳ ಜೊತೆಯಲ್ಲಿ ಹಲವು ಜಾಹೀರಾತುಗಳಲ್ಲಿ ಮಾಳವಿ ಕಾಣಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *