ಮಡಿಕೇರಿ: ನಗರಸಭೆ ಚುನಾವಣೆ ಹಿನ್ನೆಲೆ ಮತಗಟ್ಟೆಗಳ ಬಳಿ ಬಿಜೆಪಿ ಕಾರ್ಯಕರ್ತರು ಕೋವಿಡ್ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ದಿನಗಳೆದಂತೆ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶದ ಜನರೇ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಇಂದು ಮಡಿಕೇರಿ ನಗರಸಭೆ ಚುನಾವಣೆ ನಡೆಸಲು ಸರ್ಕಾರ ಅದೇಶ ಮಾಡಿದೆ.
Advertisement
Advertisement
ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಜನರು ಬೆಳಗ್ಗೆಯಿಂದಲೂ ಉತ್ಸಾಹದಿಂದ ಮತಗಟ್ಟೆಗಳತ್ತ ಹೋಗಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಂಡು ಮತ ಹಾಕುತ್ತಿದ್ದಾರೆ. ಅದರೆ ಜನರಿಗೆ ಬುದ್ಧಿ ಹೇಳುವ ಜನ ನಾಯಕರೇ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ.
Advertisement
ಮಡಿಕೇರಿ ನಗರದ ಜ್ಯೂನಿಯರ್ ಕಾಲೇಜು ಮತಗಟ್ಟೆ ಹೊರಗೆ ಕೋವಿಡ್ ನಿಯಮವನ್ನು ಬಿಜೆಪಿ ಎಂಎಲ್‍ಸಿ ಸುನೀಲ್ ಸುಬ್ರಹ್ಮಣಿ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ಹಾಗೂ ಮತದಾರರೊಂದಿಗೆ ಗುಂಪು ಗುಂಪಾಗಿ ನಿಂತು ನಿಯಮ ಉಲ್ಲಂಘನೆ ಮಾಡಿದ್ದಾರೆ. ಅಲ್ಲದೇ ಮತದಾರದ ಕೈ ಹಿಡಿದು ಪಕ್ಷದ ಅಭ್ಯರ್ಥಿಪರ ಮತ ಹಾಕುವಂತೆ ಮನವಿಯನ್ನು ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು.
Advertisement
ಮಡಿಕೇರಿ ನಗರಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿರಾಜಪೇಟೆ ಶಾಸಕ ಬೋಪಯ್ಯ ಸ್ವಕುಟುಂಬ ಸಮೇತರಾಗಿ ಬಂದು ಮಡಿಕೇರಿ ಜೂನಿಯರ್ ಕಾಲೇಜಿನ ಮತಗಟ್ಟೆ ಸಂಖ್ಯೆ ಆರರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಳಿಕ ಮಾತಾನಾಡಿದ ಅವರು ನಗರದಲ್ಲಿ 23 ವಾಡ್9 ಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಹಾಕಲಾಗಿದೆ. ಇದರಲ್ಲಿ 15 ವಾಡ್9 ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಈ ಬಾರಿ ನಗರಸಭೆಯ ಅಧಿಕಾರದ ಚುಕ್ಕಾಣಿ ಬಿಜೆಪಿ ಪರವಾಗಿರುತ್ತದೆ ಎಂದರು.
ಕೋವಿಡ್ ನಿಯಂತ್ರಣಕ್ಕೆ ರಾಜ್ಯಕ್ಕೆ ಟಫ್ ರೂಲ್ಸ್ ಅಗತ್ಯವಿತ್ತು ಎಂದ ಬೋಪಯ್ಯ ಬೆಂಗಳೂರಿಗೆ ಯಾವೆಲ್ಲಾ ರಾಜ್ಯಗಳಿಂದ ಜನರು ಬರುತ್ತಿದ್ದರು. ಬೆಂಗಳೂರಿಂದ ಹಳ್ಳಿಗಳಿಗೂ ಜನರ ಓಡಾಟವಿತ್ತು. ಹೀಗಾಗಿ ಟಫ್ ರೂಲ್ಸ್ ಜಾರಿ ಮಾಡಿರುವುದು ಸೂಕ್ತ. ಬೆಂಗಳೂರಿಂದ ಕೊಡಗಿಗೆ ಬಂದಿರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಬೇಕು. ಅಂತಹವರಿಗೆ ಹೋಂ ಕ್ವಾರಂಟೈನ್ ಮಾಡಬೇಕಾಗಿರುವುದು ಕಡ್ಡಾಯ ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಕೆ.ಜಿ ಬೋಪಯ್ಯ ಸಲಹೆ ನೀಡಿದ್ರು.