ಬೆಂಗಳೂರು: ಲಾಕ್ ಡೌನ್ ಸಂಧರ್ಭದಲ್ಲಿ ಬೀದಿನಾಯಿಗಳು ಹಸಿವಿನಿಂದ ಒದ್ದಾಡಬಾರದೆಂದು ಬಿಬಿಎಂಪಿ ವತಿಯಿಂದ ಎರಡು ದಿನಕ್ಕೊಮ್ಮೆ ಅನ್ನ, ಚಿಕನ್, ಮೊಟ್ಟೆಯ ಊಟವನ್ನು ನೀಡಲಾಗುತ್ತಿದೆ.
ಲಾಕ್‍ಡೌನ್ ಸಂದರ್ಭದಲ್ಲಿ ಬೀದಿಬದಿ ಹೋಟೆಲ್‍ಗಳ ಸಂಖ್ಯೆ ಕಡಿಮೆ, ಸಭೆ ಸಮಾರಂಭಗಳು ಸ್ಥಗಿತವಾಗಿ ಬೀದಿನಾಯಿಗಳಿಗೂ ಆಹಾರ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಸುಮಾರು 3 ಲಕ್ಷ ಬೀದಿ ನಾಯಿಗಳಿಗೂ ಬಿಬಿಎಂಪಿಯೇ, ಎಬಿಸಿ ಚಿಕಿತ್ಸೆಯ ಗುತ್ತಿಗೆದಾರರ ಮೂಲಕ ಆಹಾರ ತಯಾರಿಸಿ ನೀಡುತ್ತಿದೆ.
Advertisement
Advertisement
ಈ ಬಗ್ಗೆ ಮಾಹಿತಿ ನೀಡಿದ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಎಸ್ ಎಂ ಮಂಜುನಾಥ ಶಿಂಧೆ, ಲಾಕ್ ಡೌನ್ ಆರಂಭ ಆದಾಗಿನಿಂದ ಮುಗಿಯುವವರೆಗೆ ಆಹಾರ ನೀಡಲು 15 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಪ್ರತಿ ಎಂಟು ವಲಯಗಳಲ್ಲಿಯೂ ಸಹ ಪ್ರತಿನಿತ್ಯ 3000 ಬೀದಿನಾಯಿಗಳಿಗೆ ಆಹಾರ ಕೊಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೀದಿ ನಾಯಿಯ ಕಣ್ಣೀರಿನ ಕೃತಜ್ಞತೆ -ವಿಡಿಯೋ ವೈರಲ್
Advertisement
Advertisement
ಆಹಾರ ತಯಾರಿಸಲು ಹಾಲು, ಅಕ್ಕಿ, ಚಿಕನ್, ಮೊಟ್ಟೆ ಕೊಡಲಾಗ್ತಿದೆ. ಬೇಯಿಸಲು ಸಾಧ್ಯವಾಗದ ಕಡೆ ತಯಾರಿಸಿದ ನಾಯಿಗಳ ರೆಡಿಮೇಡ್ ಆಹಾರ ಕೊಡಲಾಗ್ತಿದೆ. ಪ್ರತಿ ವಲಯಗಳಲ್ಲಿ 30-40 ಪ್ರಾಣಿಪ್ರಿಯರು ಈ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಕಳೆದ ಬಾರಿ ಲಾಕ್ ಡೌನ್ ನಲ್ಲಿ ಎಬಿಸಿ ಚಿಕಿತ್ಸೆ ನಡೆಯದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಆಹಾರ ಕೊಡುವಂತೆ ತಿಳಿಸಲಾಗಿತ್ತು. ಆದರೆ ಈ ಬಾರಿ ಲಾಕ್ ಡೌನ್ ನಲ್ಲೂ ಎಬಿಸಿ, ರೇಬೀಸ್ ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ತಿಳಿಸಿದರು.