ಚಿಕ್ಕಬಳ್ಳಾಪುರ: ನಕಲಿ ಮದ್ಯ ತಯಾರಿಸಿ ಬಾರ್, ವೈನ್‍ಸ್ಟೋರ್, ರೇಸ್ಟೋರೆಂಟ್‍ಗಳಿಗೆ ಸರಬರಾಜು ಮಾಡುತ್ತಿದ್ದ ಘಟಕದ ಮೇಲೆ ದಾಳಿ ನಡೆಸಿ ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ತಾದೂರು ಗ್ರಾಮದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಅಪಾಯಕಾರಿ ನಕಲಿ ಮದ್ಯ ತಯಾರಿಸಿ ಅಸಲಿ ಬಾರ್, ವೈನ್ಸ್ ಸ್ಟೋರ್, ರೇಸ್ಟೋರೆಂಟ್‍ಗಳಿಗೆ ಸರಬರಾಜು ಮಾಡಲಾಗುತ್ತಿತ್ತು, ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾ ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ ಈತನನ್ನು ಬಂಧಿಸಿದ್ದಾರೆ.
ದಾಳಿ ವೇಳೆ 37,800 ಲೀಟರ್ ನಕಲಿ ಮದ್ಯ, 1290 ಲೀಟರ್ ಸ್ಪಿರಿಟ್, 62 ಲೀಟರ್ ಬ್ಲೆಂಡ್, ಪ್ರತಿಷ್ಠಿತ ಕಂಪನಿಗಳ ಮದ್ಯದ ಬಾಟ್ಲಿ ಕ್ಯಾಪ್ ಗಳು, ಖಾಲಿ ಬಾಟ್ಲಿಗಳು, ನಕಲಿ ಹಾಲೊ ಗ್ರಾಮ್, ಕ್ಯಾಪ್ ತ್ರೇಡ್ಡಿಂಗ್ ಯಂತ್ರಗಳು, ಅಳತೆ ಜಾರುಗಳು, ಹತ್ತು ಎಸೆನ್ಸ್ ಬಾಟ್ಲಿಗಳು, ಕ್ಯಾರಮೆಲ್ ಸೇರಿದಂತೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಡಿ.ವೈ.ಎಸ್ಪಿ ವಿಶ್ವನಾಥ್ ಬಾಬು ತಿಳಿಸಿದ್ದಾರೆ.
ಅಧಿಕಾರಿಗಳು ಜಪ್ತಿ ಮಾಡಿರುವ ನಕಲಿ ಮದ್ಯ ತುಂಬಿದ ಬಾಟ್ಲಿಗಳ ಮೇಲೆ, ತಮಿಳುನಾಡಿನಲ್ಲಿ ಮಾತ್ರ ಮಾರಾಟಕ್ಕೆ ಅಂತ ಇದೆ, ಆದ್ರೆ ಆರೋಪಿಗಳು ಒಂದೊಂದು ಸಮಯದಲ್ಲಿ ಒಂದೊಂದು ಬ್ರ್ಯಾಂಡ್‍ಗಳ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದು, ಇವರ ಹಿಂದೆ ವ್ಯವಸ್ಥಿತವಾದ ಜಾಲವೇ ಇದ್ದು ಅಧಿಕಾರಿಗಳು ನಕಲಿ ಮದ್ಯದ ಧಂದೆಗೆ ಕಡಿವಾಣ ಹಾಕಬೇಕಿದೆ ಎಂದು ಮದ್ಯ ಪ್ರಿಯರು ಹೇಳುತ್ತಿದ್ದಾರೆ.