– ವಾಚ್ ಖರೀದಿಗೆ ಹೋಗಿ ಸಿಕ್ಕಿಬಿದ್ದ
ಫ್ಲೋರಿಡಾ: ನಕಲಿ ಚೆಕ್ ಬಳಸಿ 1 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿ ಮಾಡಿದ್ದ ಹೈಟೆಕ್ ಕಳ್ಳನನ್ನು ಫ್ಲೋರಿಡಾದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕಳ್ಳನನ್ನು 42 ವರ್ಷದ ಕೇಸಿ ವಿಲಿಯಂ ಕೆಲ್ಲಿ ಎಂದು ಗುರುತಿಸಲಾಗಿದೆ. ಈತ ತಾನು ಮನೆಯಲ್ಲೇ ತನ್ನ ಕಂಪ್ಯೂಟರ್ ಬಳಸಿ ನಕಲಿ ಚೆಕ್‍ವೊಂದನ್ನು ಪ್ರಿಂಟ್ ಮಾಡಿ ಅದರಲ್ಲಿ ಒಂದು ಕೋಟಿ ಮೌಲ್ಯದ ಪೋರ್ಷೆ ಕಾರು ಖರೀದಿ ಮಾಡಿದ್ದಾನೆ. ನಂತರ ಇದೇ ರೀತಿ ರೋಲೆಕ್ಸ್ ವಾಚ್ ಖರೀದಿ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.
Advertisement
https://www.facebook.com/WCSOFL/posts/10157121884506493
Advertisement
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕೆಲ್ಲಿ ಜುಲೈ 27ರಂದು ಫ್ಲೋರಿಡಾದ ಒಕಲೂಸಾ ಕೌಂಟಿ ನಗರಕ್ಕೆ ಹೋಗಿದ್ದಾನೆ. ಅಲ್ಲಿ ಪೋರ್ಷೆ ಡೆಸ್ಟಿನ್ ಶೋರೂಮ್‍ಗೆ ಹೋಗಿ, ಪೋರ್ಷೆ 911 ಟರ್ಬೋ ಎಂಬ ಕಾರನ್ನು ಖರೀದಿ ಮಾಡಿದ್ದಾನೆ. ಖರೀದಿ ವೇಳೆ 1 ಕೋಟಿ 30 ಲಕ್ಷ ಮೌಲ್ಯದ ಚೆಕ್ ನೀಡಿದ್ದಾನೆ. ಇದನ್ನು ನಕಲಿ ಎಂದು ತಿಳಿಯದ ಶೋರೂಮ್ ಸಿಬ್ಬಂದಿ ಆತನಿಗೆ ಕಾರು ಕೊಟ್ಟು ಕಳುಹಿಸಿದ್ದಾರೆ.
Advertisement
Advertisement
ಇದಾದ ನಂತರ ಶೋರೂಮ್ ಸಿಬ್ಬಂದಿ ಚೆಕ್ ಅನ್ನು ತೆಗೆದುಕೊಂಡು ಬ್ಯಾಂಕ್‍ಗೆ ಹೋದಾಗ, ಇದು ನಕಲಿ ಚೆಕ್ ಎಂದು ತಿಳಿದು ಬಂದಿದೆ. ಆಗ ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಐಷಾರಾಮಿ ಕಾರು ಕೊಳ್ಳುವ ಆಸೆ ಹೊಂದಿದ್ದ, ಕೆಲ್ಲಿ ನಕಲಿ ಚೆಕ್ ಬಳಸಿ ಕಾರುಕೊಂಡು ಅದರ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಈ ವೇಳೆ ಕೆಲ್ಲಿಯನ್ನು ಪೊಲೀಸರು ಹುಡುಕಲು ಶುರು ಮಾಡಿದ್ದಾರೆ. ಆದರೆ ಆತ ಸಿಕ್ಕಿಲ್ಲ. ಇದರ ಮಧ್ಯೆ ಮತ್ತೆ ಇದೇ ರೀತಿ ಚೆಕ್ ತಯಾರು ಮಾಡಿದ ಕೆಲ್ಲಿ, ಅದನ್ನು ಉಪಯೋಗಿಸಿ ದುಬಾರಿ ರೋಲೆಕ್ಸ್ ವಾಚ್ ಕೊಳ್ಳುಲು ಹೋಗಿದ್ದಾನೆ. ಈ ವೇಳೆ ಆತ ನೀಡಿದ ಚೆಕ್ ನೋಡಿ ಅನುಮಾನಗೊಂಡು ಅಲ್ಲಿನ ಸಿಬ್ಬಂದಿ ಆತನನ್ನು ಅಲ್ಲೇ ಕುರಿಸಿಕೊಂಡು ನಂತರ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಬಂದ ಪೊಲೀಸರು ಕೆಲ್ಲಿಯನ್ನು ಬಂಧಿಸಿದ್ದಾರೆ.