– ಮೂರನೇ ಅಲೆಗೆ ಪ್ರವಾಸಿಗರು ಡೋಂಟ್ ಕೇರ್
ಚಿಕ್ಕಬಳ್ಳಾಪುರ: ನಂದಿಬೆಟ್ಟ ಬಂದ್ ಆಗಿದ್ದರಿಂದ ಪ್ರವಾಸಿಗರು ಪಕ್ಕದ ಬ್ರಹ್ಮಗಿರಿ ಬೆಟ್ಟ ಏರಿ ಹುಚ್ಚಾಟ ಪ್ರದರ್ಶಿಸಿದ್ದಾರೆ.
ಕೊರೊನಾ ಮೂರನೇ ಅಲೆಗೂ ಪ್ರವಾಸಿಗರು ಡೋಂಟ್ ಕೇರ್ ಎಂಬಂತೆ ವರ್ತಿಸುತ್ತಿದ್ದು, ವಿಶ್ವವಿಖ್ಯಾತ ನಂದಿಗಿರಿಧಾಮದತ್ತ ಸಾವಿರಾರು ಮಂದಿ ಆಗಮಿಸಿದ್ದಾರೆ. ಬೆಳ್ಳಂ ಬೆಲಗ್ಗೆ ಕಾರು ಹಾಗೂ ಬೈಕ್ ಗಳಲ್ಲಿ ಸಾವಿರಾರು ಮಂದಿ ಆಗಮಿಸಿದ್ದು. ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.
Advertisement
Advertisement
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವೀಕೆಂಡ್ ನಂದಿಬೆಟ್ಟ ಸಂಪೂರ್ಣ ಬಂದ್ ಮಾಡಿ ಲಾಕ್‍ಡೌನ್ ಮಾಡಿದ್ರೂ ಕ್ಯಾರೆ ಅನ್ನದ ಪ್ರವಾಸಿಗರು ನಂದಿಬೆಟ್ಟದತ್ತ ದಾಂಗುಡಿಯಿಟ್ಟಿದ್ದಾರೆ. ಮಾಸ್ಕ್ ಮರೆತು ಸಾಮಾಜಿಕ ಅಂತರ ನಿರ್ಲಕ್ಷ್ಯ ಮಾಡಿ ಕೊರೊನಾ ಮೂರನೇ ಅಲೆಗೆ ಅಹ್ವಾನ ಕೊಡುತ್ತಿದ್ದಾರೆ. ನೂರಾರು ಕಾರು ಬೈಕ್ ಗಳ ಆಗಮನದ ಹಿನ್ನೆಲೆ ನಂದಿಬೆಟ್ಟದ ತಪ್ಪಲಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
Advertisement
Advertisement
ಇತ್ತ ಚೆಕ್ ಪೋಸ್ಟ್ ಬಳಿ ಪ್ರವಾಸಿಗರಿಗೆ ತಡೆದಿದ್ದರಿಂದ ರಸ್ತೆಯಲ್ಲೇ ಕಾರು ಬೈಕ್ ಪಾರ್ಕ್ ಮಾಡಿದ ಪ್ರವಾಸಿಗರು ಪೊಲೀಸರ ಕಣ್ತಪ್ಪಿಸಿ ನಂದಿಬೆಟ್ಟದ ಪಕ್ಕದ ತಪ್ಪಲಿನ ಬ್ರಹ್ಮಗಿರಿ ಬೆಟ್ಟ ಏರಿ ಹುಚ್ಚಾಟ ಮೆರೆದಿದ್ದಾರೆ. ಬ್ರಹ್ಮಗಿರಿ ಬೆಟ್ಟ ಏರಿ ಫೋಟೋ, ಸೆಲ್ಫಿ ತೆಗೆದುಕೊಳ್ಳುವ ಸಾಹಸ ಮಾಡಿದ್ದಾರೆ. ಬೆಟ್ಟ ಏರಿದ ನೂರಾರು ಮಂದಿ ಪ್ರವಾಸಿಗರನ್ನ ಕೆಳಗಿಳಸಲು ಪೊಲೀಸರು ಹರಸಾಹಸಪಡುವಂತಾಗಿದೆ. ಯಾರೇ ಎಷ್ಟೆ ಹೇಳಿದ್ರೂ ನಾವ್ ಇರೋದು ಹೀಗೆ ನಾವ್ ಮಾಡೋದು ಹೀಗೆ ಅಂತ ಪ್ರವಾಸಿಗರು ತಮ್ಮ ಮೋಜುಮಸ್ತಿ ಅಂತ ನಂದಿಬೆಟ್ಟದತ್ತ ಆಗಮಿಸಿ ಕೊರೊನಾ ಗುಮ್ಮಕ್ಕೆ ಅಹ್ವಾನ ಕೊಡುತ್ತಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರಕ್ಕೆ ಎಂಟ್ರಿ ಕೊಟ್ಟ ಜಿಕಾ ವೈರಸ್ – ಪುಣೆಯ ಮಹಿಳೆಯಲ್ಲಿ ಸೋಂಕು ಪತ್ತೆ