– ಎಂಜಾಯ್ ಮೂಡ್‍ನಲ್ಲಿ ಪ್ರವಾಸಿಗರು
– ಸಾಮಾಜಿಕ ಅಂತರ ದೂರದ ಮಾತು
ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ವಾರಾಂತ್ಯ ಹಿನ್ನೆಲೆ ಇಂದು ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿದ್ದು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
Advertisement
ಇಂದು ಬೆಳ್ಳಂಬೆಳಿಗ್ಗೆ ಎಂದಿನಂತೆ ಸಾವಿರಾರು ಮಂದಿ ಪ್ರೇಮಧಾಮ ನಂದಿಬೆಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಆದರೆ ಬಹುತೇಕು ಪ್ರವಾಸಿಗರು ಮಾಸ್ಕ್ ಧರಿಸಿರಲಿಲ್ಲ. ಇನ್ನೂ ಸಾಮಾಜಿಕ ಅಂತರ ಅನ್ನೋ ನಿಯಮ ಪಾಲನೆ ಅನ್ನೋದು ದೂರದ ಮಾತು ಅನ್ನೋ ಹಾಗೆ ಪ್ರವಾಸಿಗರು ವರ್ತಿಸಿದ್ದಾರೆ.
Advertisement
Advertisement
ನಂದಿಬೆಟ್ಟಕ್ಕೆ ಆಗಮಿಸಿದ ಬಹುತೇಕರು ಮಾಸ್ಕ್ ಧರಿಸದೆ ನಂದಿಬೆಟ್ಟದಲ್ಲಿ ಒಡಾಡುತ್ತಿದ್ದು ಸರ್ವೆ ಸಾಮಾನ್ಯವಾಗಿತ್ತು. ಕೆಲವರು ಧರಿಸಿದ್ರೂ ಅದನ್ನ ಸಂಪೂರ್ಣವಾಗಿ ಬಾಯಿ ಮೂಗು ಮುಚ್ಚುವಂತಿರಲಿಲ್ಲ. ಬದಲಾಗಿ ಅಧರ್ಂಬರ್ಧ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬೇಕಾಬಿಟ್ಟಿ ಒಡಾಡಿದ್ದಾರೆ.
Advertisement
ನಂದಿಬೆಟ್ಟದಲ್ಲಿ ಮೂಲೆ ಮೂಲೆಯಲ್ಲೂ ಪ್ರವಾಸಿಗರು ತುಂಬಿ ತುಳುಕುತ್ತಿದ್ದರೂ ಕೊರೋನಾ ರೂಲ್ಸ್ ಫಾಲೋ ಮಾಡದೆ ಪ್ರವಾಸಿಗರು ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿರುವುದು ಕಂಡು ಬಂದಿದೆ. ಇಷ್ಟು ದಿನ ಕೊರೋನಾ ಎಂದರೆ ಅಲ್ಪ ಸ್ವಲ್ಪ ಮಟ್ಟದ ಭಯ ಆದರೂ ಇತ್ತು. ಈಗ ಅದ್ಯಾವುದರ ಭಯವೂ ಪ್ರವಾಸಿಗರಿಗೆ ಇಲ್ಲದಂತಾಗಿದೆ.
ಕೊರೋನಾನೇ ಇಲ್ಲ ಎಲ್ಲವೂ ಮುಗಿದು ಹೋಗಿದೆ ಅನ್ನೋ ಮನಸ್ಥಿತಿಗೆ ಜನ ಬಂದು ತಲುಪಿದಂತೆ ಭಾಸವಾಗುತ್ತಿತ್ತು. ಕೆಲವರು ಮಾಸ್ಕ್ ತಂದಿದ್ದರೂ ಜೇಬಲ್ಲಿ ಇಟ್ಕೊಂಡು ಅಡ್ಡಾಡುತ್ತಿದ್ದರು. ಇನ್ನೂ ಕ್ಯಾಮರಾ ಕಂಡಾಗ, ಇಲ್ಲ ಪ್ರಶ್ನೆ ಮಾಡಿದಾಗ ಮಾತ್ರ ಪ್ರವಾಸಿಗರು ಮಾಸ್ಕ್ ಧರಿಸುತ್ತಿದ್ದರು.
ಕೊರೋನಾ ಸಂಖ್ಯೆ ಇಳಿಮುಖ ಆಗುತ್ತಿದೆ. ಆದರೂ ಎರಡನೇ ಅಲೆ ಆಗಮಿಸುವ ಸಾಧ್ಯತೆ ಇದೆ ಜನರೇ ಎಚ್ಚರ ಅಂತ ಸರ್ಕಾರ ಎಚ್ಚರಿಕೆ ಕೊಡ್ತಿದೆ. ಆದರೂ ಕೊರೋನಾ ಇಷ್ಟೇ ನಮಗೇನು ಆಗಲ್ಲ ಅನ್ನೋ ಉದ್ಧಟತನದಲ್ಲೇ ಪ್ರವಾಸಿಗರು ಫೋಟೋ ಸೆಲ್ಫಿ ತೆಗೆದುಕೊಂಡು ತಮ್ಮಿಷ್ಟದಂತೆ ಎಂಜಾಯ್ ಮೂಡ್‍ನಲ್ಲಿದ್ದರು.