ಬೆಂಗಳೂರು: ನಟ ಧ್ರುವಸರ್ಜಾ ಅವರನ್ನು ನೋಡಲು ಬಂದ ಅಭಿಮಾನಿಯ ಬೈಕ್ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಗರದ ಕೆ.ಆರ್ ರೋಡ್ ನಲ್ಲಿ ನಡೆದಿದೆ.
ತನ್ನ ನೆಚ್ಚಿನ ನಟನನ್ನು ನೋಡಲು ಅಭಿಮಾನಿ ಸುನಿಲ್ ಜುಲೈ 2ರಂದು ಟಾಟಾ ಸಿಲ್ಕ್ ಫೋರಂ ಕೆ.ಆರ್ ರೋಡ್ ನಲ್ಲಿರೋ ಧ್ರುವ ಸರ್ಜಾ ಅವರ ಮನೆಗೆ ಬಂದಿದ್ದಾರೆ. ಈ ವೇಳೆ ಧ್ರುವ ಸರ್ಜಾ ಮನೆಯಿಂದ ಕೂದಲೆಳೆ ದೂರದಲ್ಲಿ ಬೈಕ್ ಪಾರ್ಕ್ ಮಾಡಿ ಸುನೀಲ್ ಮನೆ ಬಳಿ ಹೋಗಿದ್ದಾರೆ. ಇದನ್ನೂ ಓದಿ: ತನ್ನ ನೆಚ್ಚಿನ ಗುರುವನ್ನು ಪರಿಚಯಿಸಿ ಧನ್ಯವಾದ ಹೇಳಿದ ಧ್ರುವ ಸರ್ಜಾ
ಸುನೀಲ್ ಧ್ರುವ ಸರ್ಜಾ ಮನೆ ಬಳಿ ಹೋಗಿ ಸರ್ಜಾರನ್ನು ಭೇಟಿ ಮಾಡಿ ಮಾತನಾಡಿಸಿಕೊಂಡು ಸೆಲ್ಫಿ ತೆಗೆಸಿಕೊಂಡು ಖುಷಿ, ಖುಷಿಯಾಗಿ ಆಚೇ ಬಂದಿದ್ದಾರೆ. ಹತ್ತಾರು ಬಾರಿ ಮೊಬೈಲ್ ನಲ್ಲಿ ಧೃವ ಸರ್ಜಾ ಜೊತೆ ತೆಗೆಸಿಕೊಂಡಿದ್ದ ಸೆಲ್ಫಿ ನೋಡಿಕೊಂಡು ಮನೆಗೆ ಹೊರಡಲು ಬೈಕ್ ನೋಡಿದ್ದಾರೆ. ಈ ವೇಳೆ ಪಾರ್ಕಿಂಗ್ ಮಾಡಿದ್ದ ಸ್ಥಳದಲ್ಲಿ ಬೈಕ್ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಬೈಕ್ ಇಲ್ಲದೇ ಇರುವುದನ್ನು ಕಂಡ ಸುನೀಲ್ ಸುತ್ತಾಮುತ್ತ ಹುಡುಕಾಡಿ ಕೊನೆಗೆ ಬೈಕ್ ಸಿಗದೇ ಹೋದಾಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ಬೈಕ್ ಕದ್ದ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.