ನವದೆಹಲಿ: ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಸೆ.14 ವಿಶೇಷವಾದ ದಿನ.
ಹೌದು, 12 ವರ್ಷಗಳ ಹಿಂದೆ 2007 ರಲ್ಲಿ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಏರ್ಪಡಿಸಿತ್ತು. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ತಂಡದ ನಾಯಕರಾಗಿ ಬಿಸಿಸಿಐ ಧೋನಿಯನ್ನ ಆಯ್ಕೆ ಮಾಡಿತ್ತು. ಆ ಮೂಲಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡರು. ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯವನ್ನು ಸೆ.14 ರಂದು ಪಾಕಿಸ್ತಾವನ್ನು ಎದುರಿಸಿತ್ತು. ಪಂದ್ಯ ಟೈನಲ್ಲಿ ಅಂತ್ಯವಾದ ಪರಿಣಾಮ ಬೌಲ್ ಔಟ್ ಮೂಲಕ ಟೀಂ ಇಂಡಿಯಾ ಗೆಲುವು ಪಡೆದಿತ್ತು.
ತಂಡದ ನಾಯಕರಾಗಿ ಧೋನಿ ಪಡೆದ ಮೊದಲ ಗೆಲುವು ಇದಾಗಿತ್ತು. ನಾಯಕತ್ವ ವಹಿಸಿಕೊಂಡ ಟೂರ್ನಿಯಲ್ಲೇ ಧೋನಿ ಬಳಗ ಕಪ್ ಗೆದ್ದು ಬೀಗಿತ್ತು. ಅಂದಹಾಗೇ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಸೆ.12 ರಂದು ನೆದಲ್ರ್ಯಾಂಡ್ಸ್ ವಿರುದ್ಧ ಆಡಬೇಕಿತ್ತು. ಆದರೆ ಪಂದ್ಯ ಮಳೆಯಿಂದ ರದ್ದಾಗಿತ್ತು.
ನಾಯಕತ್ವ ವಹಿಸಿಕೊಂಡ ಮೊದಲ ಟೂರ್ನಿಯಲ್ಲೇ ಧೋನಿ ತಂಡ ಟ್ರೋಫಿ ಗೆದ್ದು ಬೀಗಿತ್ತು. ಈ ಹಿಂದೆ ವಿಶೇಷ ದಿನವನ್ನು ನೆನಪಿಸಿಕೊಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಧೋನಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಕ್ಯಾಪ್ಟನ್ ಧೋನಿಗೆ 12 ವರ್ಷ, ಟಿ20 ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಧೋನಿ ಶಕೆ ಆರಂಭವಾಗಿತ್ತು ಎಂದು ಟ್ವೀಟ್ ಮಾಡಿ ಸಂಭ್ರಮಿಸಿದ್ದರು.
38 ವರ್ಷದ ಧೋನಿ ಟೀಂ ಇಂಡಿಯಾ ಪರ ಐಸಿಸಿ ಏರ್ಪಡಿಸುವ ಎಲ್ಲ ಟೂರ್ನಿಗಳ ಕಪ್ ಗೆದ್ದ ನಾಯಕ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು. ಟೀಂ ಇಂಡಿಯಾ ಕ್ರಿಕೆಟ್‍ನಲ್ಲಿ ಯಶಸ್ವಿಯಾಗಿ ನಾಯಕತ್ವ ನಡೆಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದರು. ಅಲ್ಲದೆ ಧೋನಿ ನಾಯತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿತ್ತು. ಧೋನಿ ನಾಯಕತ್ವದಲ್ಲಿ ಆಡಿದ್ದ 60 ಟೆಸ್ಟ್ ಪಂದ್ಯಗಳಲ್ಲಿ 27 ಪಂದ್ಯಗಳಲ್ಲಿ ಗೆದ್ದು ದಾಖಲೆ ಬರೆದಿದ್ದರು. ಇತ್ತೀಚೆಗಷ್ಟೇ ಕೊಹ್ಲಿ ತಮ್ಮ ನಾಯಕತ್ವದಲ್ಲಿ 28 ಟೆಸ್ಟ್ ಗೆಲುವು ಪಡೆದು ಧೋನಿ ದಾಖಲೆಯನ್ನು ಮುರಿದಿದ್ದರು. 2014 ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸಿದ್ದರು. 2017 ರಲ್ಲಿ ಸಿಮೀತ ಓವರ್ ಗಳ ಪಂದ್ಯಗಳ ನಾಯಕತ್ವವನ್ನು ತೊರೆದಿದ್ದರು. ಇದೀಗ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.