ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಅಚ್ಚರಿಯ ನುಡಿಗಳನ್ನು ಆಡಿದ್ದಾರೆ. ಧೋನಿ ಬಗ್ಗೆ ವಿರಾಟ್ ಈ ರೀತಿ ಹೇಳುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿಗೆ, ಅಭಿಮಾನಿಯೊಬ್ಬರು ಧೋನಿ ಮತ್ತು ನಿಮ್ಮ ನಡುವಿನ ಬಾಂಧವ್ಯವನ್ನು ಎರಡು ಪದಗಳಲ್ಲಿ ಹೇಳಿ ಎಂದು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಉತ್ತರಿಸಿ ಕೊಹ್ಲಿ, ಧೋನಿ ಎಂದರೆ ನಂಬಿಕೆ ಮತ್ತು ಗೌರವ ಎಂದಿದ್ದಾರೆ. ಹೀಗೆ ಧೋನಿ ಬಗ್ಗೆ ವಿರಾಟ್ ಹೇಳುತ್ತಿದ್ದಂತೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು
ಬಳಿಕ ಅಭಿಮಾನಿಗಳು ನೀವು ಆರ್ಸಿಬಿ ತಂಡದಲ್ಲಿ ಒಬ್ಬ ಅತ್ಯುತ್ತಮ ಆಟಗಾರ, ಒಬ್ಬ ಬುದ್ಧಿವಂತ ಆಟಗಾರ ಮತ್ತು ಒಬ್ಬ ನಾಚಿಕೆ ಸ್ವಭಾವದ ಆಟಗಾರರನ್ನು ಗುರುತಿಸಬೇಕು ಎಂದಿದ್ದಾರೆ ಇದಕ್ಕೆ ಕೊಹ್ಲಿ, ಅತ್ಯುತ್ತಮ ಆಟಗಾರ ಚಹಲ್, ಬುದ್ಧಿವಂತ ಆಟಗಾರ ಎಬಿಡಿ, ನಾಚಿಕೆ ಸ್ವಭಾವದ ಆಟಗಾರ ಕೈಲ್ ಜೇಮಿಸನ್ ಎಂದು ಉತ್ತರಿದ್ದಾರೆ. ಇದನ್ನೂ ಓದಿ: ಧೋನಿ, ಕೊಹ್ಲಿಯ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಸೂರ್ಯಕುಮಾರ್ ಯಾದವ್
ಇದಾದ ಬಳಿಕ ಒಂದು ವೇಳೆ ಹಿಂದೆಯೇ ಬಂದಿದ್ದರೆ ಬೌಲರ್ ಗಳ ಪೈಕಿ ಯಾರು ನಿಮಗೆ ತೊಂದರೆ ಕೊಡುತ್ತಿದ್ದರು ಎಂಬ ಪ್ರಶ್ನೆಗೆ ಪಾಕಿಸ್ತಾನ ತಂಡದ ವೇಗದ ಬೌಲರ್ ವಾಸಿಮ್ ಅಕ್ರಮ್‍ಗೆ ಎಂದಿದ್ದಾರೆ. ನಿಮಗೆ ಕನ್ನಡ ಮಾತನಾಡಲು ಮತ್ತು ಅರ್ಥವಾಗುತ್ತದೆಯೇ ಎಂದು ಕೇಳಿದಾಗ ಸ್ವಲ್ಪ ಸ್ವಲ್ಪ ಮಾತನಾಡುತ್ತೇನೆ. ಆದರೆ ಅರ್ಥವಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಐಪಿಎಲ್ ದ್ವಿತೀಯಾರ್ಧದಲ್ಲಿ ಧೋನಿ ಬ್ಯಾಟ್‍ನಿಂದ ರನ್ ಮಳೆ ಸುರಿಯಲಿದೆ: ದೀಪಕ್ ಚಹರ್
ಈ ಮೂಲಕ ವಿರಾಟ್ ಕೊಹ್ಲಿ ಅಭಿಮಾನಿಗಳ ಪ್ರಶ್ನೆಗೆ ಸ್ಮಾರ್ಟ್ ಆಗಿ ಉತ್ತರಿಸುವ ಮೂಲಕ ಸಮಯ ಕಳೆದಿದ್ದಾರೆ. ಅಭಿಮಾನಿಗಳು ಕೂಡ ವಿರಾಟ್ ಉತ್ತರ ನೋಡಿ ಖುಷಿ ಪಟ್ಟಿದ್ದಾರೆ.