ನವದೆಹಲಿ: ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಕೆಟಿಗ ಸುರೇಶ್ ರೈನಾ ಸಹ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳುವ ಸುಳಿವು ನೀಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ ಬಳಿಕ ಇನ್‍ಸ್ಟಾಗ್ರಾಂನಲ್ಲಿ ಎಲ್ಲ ಆಟಗಾರ ಜೊತೆಗಿನ ಫೋಟೋ ಹಂಚಿಕೊಂಡಿರುವ ಸುರೇಶ್ ರೈನಾ, ನಿಮ್ಮ ಜೊತೆಗಿನ ಆಟವಿಲ್ಲದ ಮೇಲೆ ಮತ್ತೇನು? ನಿಮ್ಮ ಬಗ್ಗೆ ನನ್ನ ಹೃದಯದಲ್ಲಿ ಗೌರವದ ಸ್ಥಾನವಿದೆ. ನಾನು ಸಹ ನಿಮ್ಮ ಮಾರ್ಗವನ್ನು ಸೇರಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇಬ್ಬರು ಆಟಗಾರರು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಲಿದ್ದಾರೆ.
Advertisement
Advertisement
33 ವರ್ಷದ ಸುರೇಶ್ ರೈನಾ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯವರು. ಜುಲೈ 30. 2005ರಂದು ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಐದು ವರ್ಷಗಳ ಬಳಿಕ ಅದೇ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯ ಆಡಿದ್ದಾರೆ. 2011ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಇವರೂ ಸಹ ಟೀಮ್ ಮೇಟ್ ಆಗಿದ್ದರು. ಅಲ್ಲದೆ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಹ ಧೋನಿ ಜೊತೆ ಆಟವಾಡಿದ್ದರು. 2015ರ ವಿಶ್ವಕಪ್‍ನಲ್ಲಿ ಸಹ ತಂಡದಲ್ಲಿದ್ದರು. ಆದರೆ ಹೆಚ್ಚು ಕಾಣಿಸಿಕೊಂಡಿರಲಿಲ್ಲ.
Advertisement
Advertisement
ರೈನಾ 2016 ರಿಂದ 2018ರ ವರೆಗಿನ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಟಿ20 ಪಂದ್ಯಕ್ಕೆ ಸಹ ರೈನಾ ಆಯ್ಕೆಯಾಗಿದ್ದರು. ಆದರೆ 2018ರ ಯುನೈಟೆಡ್ ಕೋರಿಯಾ ಪ್ರವಾಸದ ಕಾರಣ ಈ ಪಂದ್ಯದಿಂದಲೂ ಹೊರಗುಳಿದರು. ಲೆಫ್ಟ್ ಹ್ಯಾಂಡೆಡ್ ಬ್ಯಾಟ್ಸ್‍ಮನ್ ಸುರೇಶ್ ರೈನಾ ಕೇವಲ 18 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ. 31 ಪಂದ್ಯಗಳಲ್ಲಿ 768 ರನ್‍ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ, 7 ಅರ್ಧ ಶತಕಗಳು ಸಹ ಒಳಗೊಂಡಿವೆ.
226 ಏಕದಿನ ಪಂದ್ಯಗಳಲ್ಲಿ ಸುರೇಶ್ ರೈನಾ 5,615 ರನ್ ಗಳಿಸಿದ್ದಾರೆ. 78 ಟಿ-20 ಪಂದ್ಯಗಳನ್ನು ಆಡಿದ್ದು, 1,605 ನರ್ ಕಲೆ ಹಾಕಿದ್ದಾರೆ. ಧೋನಿ ಜೋತೆಯಾಟದಲ್ಲಿ ರೈನಾ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇದೀಗ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮತ್ತೆ ಇಬ್ಬರೂ ಜೊತೆಯಾಗಲಿದ್ದಾರೆ.