ಧಾರವಾಡ: ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಗಮನಿಸಬೇಕಿದೆ. ಜಿಲ್ಲೆಯಲ್ಲಿ ಇನ್ನೂ 24ರ ವರೆಗೆ ಲಾಕ್‍ಡೌನ್ ಇದೆ. ಗುರುವಾರ ಕ್ಯಾಬಿನೆಟ್ ಸಭೆ ಇದೆ ಅಲ್ಲಿಯೂ ಚರ್ಚಿಸುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
Advertisement
ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳ ಹಾಗೂ ಶಾಸಕರ ಸಭೆ ನಡೆಸಿದರು. ಸಭೆಯ ನಂತರ ಮಾತನಾಡಿದ ಅವರು, ಬೆಂಗಳೂರು ಲಾಕ್‍ಡೌನ್ ಮುಂದುವರಿಸುವುದಿಲ್ಲ ಎಂದು ಸಿಎಂ ಹೇಳಿದ್ದಾರೆ, ಹೀಗಾಗಿ ಮೇಲಿನವರ ಜೊತೆ ಮಾತನಾಡಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
Advertisement
ಧಾರವಾಡ ಜಿಲ್ಲೆಯಲ್ಲಿ ಒಂದು ವಾರದಲ್ಲಿ ಅತೀ ಹೆಚ್ಚು ಕೇಸ್ ದಾಖಲಾಗಿವೆ. ಹೀಗಾಗಿ ಏನು ವ್ಯವಸ್ಥೆ ಮಾಡಬೇಕೋ ಅದನ್ನು ಮಾಡುತ್ತೇವೆ. ಸೋಂಕು ಹೆಚ್ಚು ಹರಡದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಸಾವಿನ ಪ್ರಮಾಣ ಕಡಿಮೆಯಾಗಬೇಕಿದೆ, ಈ ಸಂಬಂಧ ಕಿಮ್ಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಪಾಸಿಟಿವ್ ಕೇಸ್ ಜಾಸ್ತಿ ಆಗಿದ್ದಕ್ಕೆ ಧಾರವಾಡ ಜಿಲ್ಲೆ ಜನ ಗಾಬರಿ ಪಡಬೇಕಾಗಿಲ್ಲ, ನಮ್ಮಲ್ಲಿ ಮಾತ್ರವಲ್ಲ ಬೆಂಗಳೂರು ಮತ್ತು ಬೇರೆ ಕಡೆಯೂ ಪಾಸಿಟಿವ್ ಹೆಚ್ಚಾಗಿವೆ. ಧಾರವಾಡದಲ್ಲಿ ಪ್ರಕರಣ ಹೆಚ್ಚಳ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಲ್ಲಿಯೂ ದಾಖಲು ಮಾಡುತ್ತಿದ್ದೇವೆ ಎಂದರು.
Advertisement
Advertisement
ಈಗಾಗಲೇ ಎಸ್‍ಡಿಎಂನಲ್ಲಿ 80 ಕೋವಿಡ್-19 ಪ್ರಕರಣ ದಾಖಲಾಗಿವೆ. ಕಿಮ್ಸ್ ನಲ್ಲಿ 250ರ ಸಾಮಥ್ರ್ಯ ಮುಗಿದಿದೆ. ಹೀಗಾಗಿ ಬೇರೆ ಖಾಸಗಿ ಆಸ್ಪತ್ರೆಗಳಲ್ಲಿಯೂ ದಾಖಲು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.