-ಪೇಡಾ ನಗರಿಗೂ ಮಹಾರಾಷ್ಟ್ರ ಕಂಟಕ
ಧಾರವಾಡ: ಕಳೆದ ವಾರದ ಕೊನೆಯವರೆಗೂ ಯಾವುದೇ ಹೊಸ ಕೇಸ್ ಇಲ್ಲದೆ ತಣ್ಣಗಾಗಿದ್ದ ಧಾರವಾಡ ಜಿಲ್ಲೆಯಲ್ಲಿಗ ಕೊರೊನಾ ರಣಕೇಕೆ ಮತ್ತೆ ಶುರುವಾಗಿದ್ದು, ಒಂದೇ ದಿನ ನಾಲ್ವರಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದೆ.
Advertisement
ಇಂದು ದೃಢ ಪಟ್ಟಿರುವ ನಾಲ್ಕು ಪ್ರಕರಣ ಪೈಕಿ ಒಬ್ಬರಿಗೆ ಸ್ಥಳೀಯ ಸಂಪರ್ಕದಿಂದ ಸೋಂಕು ತಗುಲಿರೋದು ಆಗಿದ್ರೆ, ಉಳಿದ ಮೂರೂ ಸಹ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಹೊಂದಿವೆ. ಮುಂಬೈನಿಂದ ಬಂದಿರುವ 39 ವರ್ಷದ ಪುರುಷ (ರೋಗಿ-1123) ಹಾಗೂ 28 ವರ್ಷದ ಮಹಿಳೆ (ರೋಗಿ-1142) ಯಾಗಿದ್ದು, ಕೊಲ್ಲಾಪುರದಿಂದ ಬಂದಿದ್ದ 25 ವರ್ಷದ ಪುರುಷ (ರೋಗಿ-1143) ಸೋಂಕಿತರಾಗಿದ್ದಾರೆ.
Advertisement
Advertisement
ಹುಬ್ಬಳ್ಳಿ ಶಾಂತಿನಗರದ ರೋಗಿ-589 ಸಂಪರ್ಕಕ್ಕೆ ಬಂದಿದ್ದ 16 ವರ್ಷದ ಬಾಲಕ(ರೋಗಿ-1124)ನಿಗೂ ಸೋಂಕು ತಗುಲಿದೆ. ರೋಗಿ-589ಗೆ ಸೋಂಕು ದೃಢವಾದ ಎರಡು ವಾರಗಳ ಸುದೀರ್ಘ ಅವಧಿ ಬಳಿ ಸಂಪರ್ಕಿತನೋರ್ವನಲ್ಲಿ ಸೋಂಕು ಕಂಡಿದೆ. ಭಾನುವಾರದ ನಾಲ್ಕು ಪ್ರಕರಣ ಸೇರಿ ಧಾರವಾಡದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗ 26ಕ್ಕೆ ಏರಿಕೆಯಾಗಿದ್ದು, ಸದ್ಯ ಅದರಲ್ಲಿ 19 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಎರಡೇ ವಾರದಲ್ಲಿ 9 ಜನ ಗುಜರಾತ್‍ನಿಂದ ಬಂದವರಾಗಿದ್ದರೇ, ಉಳಿದ ಐವರು ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆ ಹೊಂದಿದವರು.