ನೆಲಮಂಗಲ: ವಿಕಲಚೇತನರನ್ನು ಸಮಾಜದಲ್ಲಿ ದಿವ್ಯಾಂಗರು ಎಂದು ಕರೆಯಲಾಗಿರುವುದು ಉತ್ತಮ ಕೆಲಸ. ಕೋವಿಡ್ 19 ಸಂದರ್ಭದಲ್ಲಿ ಮೊದಲೇ ಕುಂದಿರುವ ಸಮಾಜದಲ್ಲಿ ದಿವ್ಯಾಂಗರಿಗೆ ನೈತಿಕ ಮೌಲ್ಯ ಕುಸಿತವಾಗಿರುವ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಉತ್ತಮ ಕೆಲಸ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಹೋಬಳಿಯಲ್ಲಿ ಹಾಗೂ ನರಸೀಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಎಲ್ಲಾ ಸುಮಾರು ನೂರಾರು ದಿವ್ಯಾಂಗರಿಗೆ ಆಹಾರ ಕಿಟ್ ವಿತರಿಸಲಾಯಿತು.
Advertisement
Advertisement
ಇದೇ ವೇಳೆಯಲ್ಲಿ ಧರ್ಮಸ್ಥಳ ಸಂಘದ ಪ್ರಾದೇಶಿಕ ಅಧ್ಯಕ್ಷ ಶಿನಪ್ಪಾ ಮಾತನಾಡಿ, ಎಲ್ಲರೂ ಸಾರ್ವಜನಿಕರಿಗೆ ಕಿಟ್ ನೀಡುತ್ತಾರೆ. ಆದರೆ ಡಾ.ವಿರೇಂದ್ರ ಹೆಗಡೆಯವರ ಕಲ್ಪನೆಯ ಕೂಸಾದ ನಮ್ಮ ಸಂಘ ದಿವ್ಯಾಂಗರನ್ನು ಗುರುತಿಸಿದೆ. ಈಗಾಗಲೇ ಕೋವಿಡ್ ಕೇರ್ ಸೆಂಟರ್ ಗಳಿಗೆ ಅಗತ್ಯ ನೆರವು ನೀಡಿದ್ದೆವೆ ಎಂದರು. ಇದನ್ನೂ ಓದಿ: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ದೋಷ ಇದ್ಯಾ? – ಕೆಲ ನಿಮಿಷದಲ್ಲಿ ಸರಿ ಮಾಡಿ
Advertisement
23 ದಿನಗಳಿಂದ ಡಾಬಸ್ ಪೇಟೆಯ ಹೋಬಳಿಯಾದ್ಯಂತ 06 ಪಂಚಾಯ್ತಿಗಳಿಗೆ ಸುಮಾರು 10 ಸಾವಿರ ಕಿಟ್ ನೀಡಿರುವ ಜಗದೀಶ್ ಚೌದರಿಯವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲಾ ಅಂಗ ಚೆನ್ನಾಗಿರುವ ಮಾನವರೇ ಸಮಾಜದಲ್ಲಿ ಬದುಕುವುದು ಕಷ್ಟ. ಆದರೆ ದಿನನಿತ್ಯ ಸವಾಲನ್ನು ಎದುರಿಸುತ್ತಿರುವ ವಿಕಲಚೇತನರು, ಹೋರಾಟ ನಡೆಸುವವರಿಗೆ ನಮ್ಮ ಅಭಿನಂದನೆ ಎಂದರು.