ಹಾವೇರಿ: ಐತಿಹಾಸಿಕ ಸುಕ್ಷೇತ್ರವಾದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ದೇವರ ಕಾರ್ಣಿಕದ ವಾಣಿಯನ್ನು ಧರ್ಮಧರ್ಶಿ ವೆಂಕಪ್ಪಯ್ಯ ಒಡೆಯರ್ ಮರು ವಿಶ್ಲೇಷಣೆ ಮಾಡಿ, ದೇವರ ಕಾರ್ಣಿಕ ನುಡಿಗೆ ಅಪಮಾನ ಮಾಡಿದ್ದಾರೆ ಎಂದು ಕಾರ್ಣಿಕ ನುಡಿಯುವ ಗೊರವಯ್ಯ ರಾಮಪ್ಪ ಹಾಗೂ ದೇವಸ್ಥಾನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಭರತ ಹುಣ್ಣುಮೆ ಆಗಿ ಮೂರು ದಿನಕ್ಕೆ ಗೊರವಯ್ಯ ಸ್ವಾಮಿ ಜಪತಪ ಮಾಡಿ 11 ದಿವಸ ಉಪವಾಸವಿದ್ದು ದೇವರ ವಾಣಿಯನ್ನ ನುಡಿಯುತ್ತಾರೆ. ಈ ವರ್ಷ ಮುತ್ತಿನ ರಾಶಿ ಮೂರು ಭಾಗವಾಗಿತಲೇ ಪಾರಾಕ್ ಎಂದು ವಾಣಿಯನ್ನ ಹೇಳಿದ್ದಾರೆ. ಇದನ್ನು ಧರ್ಮಮರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಆ ದಿನ ಮಾತ್ರ ವಿಶ್ಲೇಷಣೆ ಮಾಡಬೇಕು. ಅದರೆ ತಮ್ಮ ಲಾಭಕ್ಕಾಗಿ, ರಾಜಕೀಯ ವ್ಯಕ್ತಿಗಳು ಬಂದಾಗ ಕಾರ್ಣಿಕವನ್ನು ಹೇಳಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದಾಗ ಮುಖ್ಯಮಂತ್ರಿ ಆಗುತ್ತೀರಿ ಅಂದಿದ್ದರು. ಈಗ ಎರಡು ದಿನದ ಹಿಂದೆ 2023ಕ್ಕೆ ಗಡ್ಡಧಾರಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ 6-7 ತಿಂಗಳು ಮಾತ್ರ ಅಧಿಕಾರ ಮಾಡಲಿದ್ದಾರೆ ಎಂದಿದ್ದಾರೆ. ಈ ಹಿಂದೆ ಕೆ.ಎಸ್.ಈಶ್ವರಪ್ಪ ಹಾಗೂ ಬೈರತಿ ಬಸವರಾಜ ಸಹ ಕ್ಷೇತ್ರಕ್ಕೆ ಭೇಟಿ ನೀಡಿದಾಗ ನಿಮಗೆ ಮುಖ್ಯಮಂತ್ರಿ ಆಗುವ ಅವಕಾಶ ಇದೆ ಎಂದು ಹೇಳಿದ್ದಾರೆ. ದೇವರ ವಾಣಿಯನ್ನ ತಮಗೆ ಬೇಕಾದ ರೀತಿಯಲ್ಲಿ ತಿರುಚಿ ಹೇಳುತ್ತಿದ್ದಾರೆ. ಮೈಲಾರಲಿಂಗೇಶ್ವರ ಭಕ್ತರು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಮಾತು ಕೇಳಬಾರದು ಎಂದು ಭಕ್ತರು ಹೇಳಿದ್ದಾರೆ.
ಮೈಲಾರಲಿಂಗೇಶ್ವರ ಹೆಸರಿನಲ್ಲಿ ಧರ್ಮಧರ್ಶಿ ವೆಂಕಪ್ಪಯ್ಯ ಒಡೆಯರ್ ದೈವವಾಣಿಗೆ ಅಪಮಾನ ಮಾಡುತ್ತಿದ್ದಾರೆ. ಹೀಗೆ ಮುಂದುವರಿಸಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.