– ಫೋಟೋಗ್ರಾಫರ್, ವಿಡಿಯೋಗ್ರಾಫರ್ ಫುಲ್ ಬ್ಯುಸಿ
– ಚೌಟ್ರಿಗಳು ಫುಲ್ ಆಗಿ ದೇವಸ್ಥಾನಗಳಲ್ಲಿ ಮದುವೆ
ಚಿಕ್ಕಮಗಳೂರು: ಒಂದೇ ದಿನ ಸುಮಾರು 60-70 ಮದುವೆಗಳು ಹಾಗೂ ಗೃಹಪ್ರವೇಶಗಳು ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿದೆ. ಇಂದು ಬಿಟ್ಟರೆ ಒಳ್ಳೆಯ ಮಹೂರ್ತವಿಲ್ಲ ಮತ್ತೆ ಧನುರ್ಮಾಸ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಇಂದೇ ಹಲವಾರು ಶುಭಕಾರ್ಯಗಳು ನಡೆಯುತ್ತಿವೆ.
ಇದೇ ಡಿಸೆಂಬರ್ 16ನೇ ರಂದು ಧನುರ್ಮಾಸ ಆರಂಭವಾಗುವ ಹಿನ್ನೆಲೆ 16ರ ಬಳಿಕ ಉತ್ತಮವಾದ ಮಹೂರ್ತ ಇಲ್ಲವೆಂದು ಎಲ್ಲಾ ಶುಭಕಾರ್ಯಗಳನ್ನು ಇಂದೇ ಮಾಡುತ್ತಿದ್ದಾರೆ. ಮದುವೆ, ಗೃಹಪ್ರವೇಶ ಸೇರಿದಂತೆ ಶುಭಕಾರ್ಯಗಳಿಗೆ ಒಳ್ಳೆ ಮಹೂರ್ತ ಸಿಗುವುದಿಲ್ಲ ಎಂದು ಎಲ್ಲಾ ಶುಭಕಾರ್ಯಗಳನ್ನು ಮಾಡಿ ಮುಗಿಸುತ್ತಿದ್ದಾರೆ.
ಫೋಟೋ, ವೀಡಿಯೋಗ್ರಾಫರ್ ಬ್ಯುಸಿ:
ಚಿಕ್ಕಮಗಳೂರು ನಗರವೊಂದರಲ್ಲೇ ಅಸೋಸಿಯೇಷನ್‍ನಲ್ಲಿ ನೊಂದಾಯಿಸಿಕೊಂಡಿರುವ ಸುಮಾರು 183 ಜನ ಫೋಟೋಗ್ರಾಫರ್ ಹಾಗೂ ವೀಡಿಯೋಗ್ರಾಫರಗಳು ಇದ್ದಾರೆ. ಒಟ್ಟು 250 ಜನ ಇದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇಂದು ನಗರದಲ್ಲಿ ಯಾವೊಬ್ಬ ಫೋಟೋಗ್ರಾಫರ್ ಹಾಗೂ ವೀಡಿಯೋಗ್ರಾಫರ್ ಫ್ರೀ ಇಲ್ಲ. ಶೇ.95ಕ್ಕಿಂತ ಹೆಚ್ಚಿನ ಜನ ಫುಲ್ ಬ್ಯಸಿ ಇದ್ದಾರೆ.
ಕಲ್ಯಾಣ ಮಂಟಪಗಳು ತುಂಬಿವೆ:
ನಗರದಲ್ಲಿ ಸುಮಾರು 20 ರಿಂದ 25 ಕಲ್ಯಾಣ ಮಂಟಪಗಳು ಇವೆ. ಆದರೆ ಇಂದು ಯಾವುದೇ ಕಲ್ಯಾಣ ಮಂಟಪಗಳು ಖಾಲಿ ಇಲ್ಲ. ಇದರಿಂದಾಗಿ ದೇವಾಲಯಗಳಲ್ಲಿ ಹಲವು ಮದುವೆಗಳ ಕಾರ್ಯ ನಡೆಯುತ್ತಿದೆ. ಇಂದು ನಗರದ ಬೀದಿ-ಬೀದಿಗಳಲ್ಲಿಯೂ ಶುಭಕಾರ್ಯಗಳು ನಡೆಯುತ್ತಿದೆ.
ಕೊರೊನಾ ಕಾರಣದಿಂದ ಕೆಲ ಮದುವೆಗಳು ನಿಂತಿದ್ದವು. 10-20 ಜನರಲ್ಲಿ ಮದುವೆ ಮುಗಿಸಬೇಕು. ಜನ ಸೇರುವಂತಿಲ್ಲ. ಎಂಬ ಕೊರೊನಾ ಕಾನೂನುಗಳಿಂದ ಕೆಲ ಮದುವೆಗಳು ಮುಂದೆ ಹೋಗಿದ್ದವು. ಈಗ ಬಿಟ್ಟರೆ ಮತ್ತೆ ಇನ್ನೊಂದು ತಿಂಗಳು ಒಳ್ಳೆ ಮಹೂರ್ತಗಳು ಸಿಗುವುದಿಲ್ಲ ಎಂದು ಮದುವೆಗಳಿಗೂ ಮುಹೂರ್ತ ಹುಡುಕಿ ಇಂದೇ ಮದುವೆ ಮಾಡಲಾಗುತ್ತಿದೆ. ಇದು ಕೇವಲ ಚಿಕ್ಕಮಗಳೂರು ನಗರದ ಲೆಕ್ಕವಷ್ಟೆ ಇದಾಗಿದೆ. ತಾಲೂಕು ಹಾಗೂ ಜಿಲ್ಲೆಯಲ್ಲಿ ನೂರಾರು ಮದುವೆ, ಗೃಹ ಪ್ರವೇಶ ಸೇರಿದಂತೆ ಶುಭ ಕಾರ್ಯಗಳು ನಡೆಯುತ್ತಿವೆ.