– ಸರಣಿ 1-1 ಸಮಬಲ
ಕೊಲಂಬೋ: ಧನಂಜಯ ಡಿ ಸಿಲ್ವಾ ಬ್ಯಾಟಿಂಗ್ ಹೋರಾಟ ಮತ್ತು ಬೌಲರ್ ಗಳ ಉತ್ತಮ ನಿರ್ವಹಣೆಯಿಂದಾಗಿ ಎರಡನೇ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ 4 ವಿಕೆಟ್‍ಗಳ ಜಯ ಗಳಿಸಿದೆ. ಈ ಮೂಲಕ ಸರಣಿ 1-1 ಸಮಬಲವಾಗಿದೆ.
Advertisement
ಭಾರತ ನೀಡಿದ 133ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರ ಅವಿಷ್ಕಾ ಫರ್ನಾಂಡೊ ಕೇವಲ 11ರನ್(13 ಎಸೆತ, 2 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಆದರೆ ಇನ್ನೋರ್ವ ಆರಂಭಿಕ ಆಟಗಾರ ಮಿನೋಡ್ ಭನುಕಾ ಸಿಡಿಯುವ ಸೂಚನೆ ನೀಡಿದರು ಕೂಡ 36ರನ್(31 ಎಸೆತ, 4ಬೌಂಡರಿ) ಸಿಡಿಸಿ ಔಟ್ ಆದರು.
Advertisement
Sri Lanka win the 2nd #SLvIND T20I by 4 wickets!
Three-match series levelled at 1-1.
Scorecard ????https://t.co/Hsbf9yWCCh #TeamIndia pic.twitter.com/ckDkl81GB8
— BCCI (@BCCI) July 28, 2021
Advertisement
ಕೆಳಕ್ರಮಾಂಕದಲ್ಲಿ ಬಂದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ಆದರೆ ಮಧ್ಯಮಕ್ರಮಾಂಕದಲ್ಲಿ ಬಂದ ಧನಂಜಯ ಡಿ ಸಿಲ್ವಾ 40ರನ್(34 ಎಸೆತ, 1ಬೌಂಡರಿ, 1 ಸಿಕ್ಸ್) ಬಾರಿಸಿ ಅಜೇಯರಾಗಿ ಕಡೆಯವರೆಗೆ ಹೋರಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಶ್ರೀಲಂಕಾ ತಂಡ 19.4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 133ರನ್ ಸಿಡಿಸುವ ಮೂಲಕ ಗೆಲುವಿನ ನಗೆ ಬೀರಿತು.
Advertisement
ಭಾರತ ಪರ ಕುಲ್‍ದೀಪ್ ಯಾದವ್ 2 ವಿಕೆಟ್ ಪಡೆದರೆ. ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ, ರಾಹುಲ್ ಚಹರ್ ತಲಾ 1 ವಿಕೆಟ್ ಕಿತ್ತರು.
ಸಾಧರಣ ಮೊತ್ತ ಕಳೆಹಾಕಿದ ಭಾರತ:
ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಭಾರತ ತಂಡಕ್ಕೆ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಋತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‍ಗೆ ಈ ಜೋಡಿ 49ರನ್(42 ಎಸೆತ) ಜೊತೆಯಾಟವಾಡಿತು. ಋತುರಾಜ್ ಗಾಯಕ್ವಾಡ್ 21ರನ್( 18 ಎಸೆತ, 1 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿದರೆ. ಧವನ್ ಆಟ 40ರನ್(42 ಎಸೆತ,5 ಬೌಂಡರಿ)ಗೆ ಸೀಮಿತವಾಯಿತು. ದೇವದತ್ ಪಡಿಕ್ಕಲ್ 29ರನ್(23 ಎಸೆತ, 1 ಬೌಂಡರಿ, 1 ಸಿಕ್ಸ್) ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸಂಜು ಸ್ಯಾಮ್ಸನ್, ನಿತೇಶ್ ರಾಣಾ ಒಂದಕ್ಕಿ ಮೊತ್ತಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಭುವನೇಶ್ವರ್ ಕುಮಾರ್ 13ರನ್(11 ಎಸೆತ, ) ಬಾರಿಸಿ ಅಜೇಯರಾಗಿ ಉಳಿಯುವುದರೊಂದಿಗೆ ತಂಡದ ಮೊತ್ತವನ್ನು 130ರ ಗಡಿದಾಟಿಸಿದರು. ಅಂತಿಮವಾಗಿ ನಿಗದಿತ 20 ಓವರ್ ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು.
ಅಕಿಲಾ ದನಂಜಯ 2 ವಿಕೆಟ್ ಪಡೆದರೆ. ವಾನಿಂದು ಹಸರಂಗ , ದಾಸುನ್ ಶಾನಕಾ ಮತ್ತು ದುಷ್ಮಂತ್ ಚಮೀರ ತಲಾ 1 ವಿಕೆಟ್ ಕಿತ್ತರು.