ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕೊರೊನಾ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆಂದು ಭಾರೀ ವಿರೋಧ ವ್ಯಕ್ತವಾಗಿದೆ.
ಕಳೆದ ಜುಲೈ 17ರಂದು ತನಗೆ ಪಾಸಿಟಿವ್ ಆಗಿದೆ ಎಂದು ಸ್ವತಃ ಮಿಥುನ್ ರೈ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಆ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಂಗಳೂರಿಗೆ ಬಂದಾಗ ಅವರೊಂದಿಗೆ ಮಿಥುನ್ ರೈ ಕಾಣಿಸಿಕೊಂಡಿದ್ದು ಜೊತೆಗೆ ಓಡಾಡಿದ್ದಾರೆ. ಇದನ್ನೂ ಓದಿ: ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಕೊರೊನಾ ಪಾಸಿಟಿವ್
Advertisement
Advertisement
ಸರ್ಕಾರದ ಕೊವೀಡ್ ನಿಯಮದಂತೆ ಕೊರೊನಾ ಪಾಸಿಟಿವ್ ಆದ ವ್ಯಕ್ತಿ ಕನಿಷ್ಠ 17 ದಿನ ಐಸೋಲೇಷನ್ ನಲ್ಲಿ ಇರೋದು ಕಡ್ಡಾಯ. ಆದರೆ ಜುಲೈ 17ರಂದು ಪಾಸಿಟಿವ್ ಆಗಿದ್ದ ಮಿಥುನ್ ರೈ ಕೇವಲ 14 ದಿನದಂದೇ ಕೆಪಿಸಿಸಿ ಅಧ್ಯಕ್ಷರ ಜೊತೆ ಓಡಾಡಿದ್ದು, ಇದೀಗ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.