– ಬಾಲಕನ ರಕ್ಷಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಏಳು ವರ್ಷದ ಬಾಲಕನ ಅಪಹರಣ ಸುಖಾಂತ್ಯವಾಗಿದ್ದು, ಕೋಲಾರದಲ್ಲಿ ಆರು ಜನರನ್ನು ಬಂಧಿಸಲಾಗಿದೆ. ಅಪಹರಣಕಾರರು 17 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಬಾಲಕನ ಪತ್ತೆಗೆ 5 ವಿಶೇಷ ತಂಡ ರಚಿಸಿದ್ದ ಪೊಲೀಸರು ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಹೊಸಳ್ಳಿ ಗ್ರಾಮದಲ್ಲಿ ಆರು ಜನರನ್ನ ಬಂಧಿಸಿ ಬಾಲಕನನ್ನು ರಕ್ಷಿಸಿದ್ದಾರೆ.
Advertisement
ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಹಾಗೂ ಮುನೇಶ್ ಎಂಬವರ ಮನೆಯೊಂದರಲ್ಲಿ ಬಾಲಕ ಅನುಭವ್ ನನ್ನು ಇರಿಸಲಾಗಿತ್ತು. ಮಂಡ್ಯ ಮೂಲದ ಗಂಗಾಧರ್, ಎಲೆಕ್ಟ್ರಾನಿಕ್ ಸಿಟಿ ಮೂಲದ ಕೋಮಲ್ ಬಂಧಿತ ಪ್ರಮುಖ ಆರೋಪಿಗಳಯ. ಕೋಲಾರ ಎಸ್.ಪಿ. ಕಾರ್ತಿಕ್ ರೆಡ್ಡಿ ನೆರವಿನಿಂದ ಮಂಗಳೂರು ಪೊಲೀಸ್ ವಿಶೇಷ ತಂಡ ಆರೋಪಿಗಳನ್ನ ಬಂಧಿಸಿದೆ. ಇಂದು ಬೆಳಗ್ಗೆ ಆರೋಪಿಗಳನು 11 ಗಂಟೆಗೆ ಕೋಲಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.
Advertisement
Advertisement
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಉದ್ಯಮಿ ರಥಬೀದಿ ನಿವಾಸಿ ಎ.ಕೆ.ಶಿವನ್ ಎಂಬವರ ಮೊಮ್ಮಗ ಅನುಭವ್ ಎಂಬ 8 ವರ್ಷದ ಬಾಲಕನನ್ನು ಗುರುವಾರ ಸಂಜೆ 6:30ಕ್ಕೆ ಮನೆಯ ಸಮೀಪದಿಂದಲೇ ಅಪಹರಣ ಮಾಡಲಾಗಿತ್ತು. ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ಅಪರಿಚಿತರು ಕಾರಿನಲ್ಲಿ ಅಪಹರಣ ಮಾಡಿದ್ದರು.
Advertisement
ಅನುಭವ್ ನ ತಂದೆ ಬಿಜೋಯ್ ಹಾರ್ಡ್ ವೇರ್ ಬ್ಯುಸಿನೆಸ್ ನಡೆಸುತ್ತಿದ್ದು, ಶುಕ್ರವಾರ ಬಾಲಕನ ತಾಯಿ ಸರಿಯಾ ಬಿಜೋಯ್ ಗೆ ಕಿಡ್ನಾಪರ್ ಕರೆ ಮಾಡಿ 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ನೀಡಲು ಬೇಡಿಕೆಯಿರಿಸಿದ್ದರು. ಬಾಲಕನ ತಂದೆಯ ಜೊತೆಗೆ ವಾಟ್ಸಾಪ್ ಚಾಟಿಂಗ್ ನಡೆಸಿದ ಅಪಹರಣಕಾರರು 60 ಬಿಟ್ ಕಾಯಿನ್ ಅಂದ್ರೆ ಹತ್ತು ಕೋಟಿ ರೂ. ನೀಡಲು ಬೇಡಿಕೆಯಿರಿಸಿದ್ದರು.