ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಕಾರ್ತಿಕ ಮಾಸ,
ಕೃಷ್ಣಪಕ್ಷ,ದ್ವಾದಶಿ/ತ್ರಯೋದಶಿ,
ಶನಿವಾರ,ವಿಶಾಖ ನಕ್ಷತ್ರ,
ರಾಹುಕಾಲ: 09 :25ರಿಂದ 10:51
ಗುಳಿಕಕಾಲ: 06:34 ರಿಂದ 07:59
ಯಮಗಂಡಕಾಲ: 01:42 ರಿಂದ 03:08
ಮೇಷ: ಸ್ತ್ರೀಯರಿಂದ ಸಂಪತ್ತು ಮತ್ತು ಅನುಕೂಲ, ಪಿತ್ರಾರ್ಜಿತ ಸ್ವತ್ತು ಒಲಿಯುವುದು, ತಂದೆಯೊಡನೆ ಉತ್ತಮ ಬಾಂಧವ್ಯ, ದಾಯಾದಿಗಳಿಂದ ನೋವು, ಪುಣ್ಯಕ್ಷೇತ್ರಗಳ ದರ್ಶನ, ಅಧಿಕ ಖರ್ಚು.
ವೃಷಭ: ಬಂಧು-ಬಾಂಧವರು ಶತ್ರುಗಳಾಗುವರು, ಪ್ರಯಾಣದಲ್ಲಿ ಸಂಕಷ್ಟಗಳು, ಸಹೋದರ ಅಥವಾ ಸಹೋದರಿಯರೊಂದಿಗೆ ಶತ್ರುತ್ವ, ಆಕಸ್ಮಿಕ ಅವಘಡಗಳು ಮತ್ತು ಅಪಘಾತಗಳು, ಗೌರವಕ್ಕೆ ಧಕ್ಕೆ.
ಮಿಥುನ: ಮಕ್ಕಳಿಂದ ಧನಸಹಾಯ, ಸಮಸ್ಯೆಗಳನ್ನು ತಂದುಕೊಳ್ಳುವುದು, ರೋಗಭಾದೆಗಳಿಂದ ಧನ ನಷ್ಟ, ಸಂಗಾತಿಯಿಂದ ಅನುಕೂಲ, ಉದ್ಯೋಗದಲ್ಲಿ ಆರ್ಥಿಕ ಪ್ರಗತಿ.
ಕಟಕ: ಆಸೆಗಳು ಈಡೇರಲಿಲ್ಲ ಎನ್ನುವ ನಿರಾಸೆ, ಹಾರ್ಮೋನ್ ವ್ಯತ್ಯಾಸದಿಂದ ಅನಾರೋಗ್ಯ, ಪಿತ್ರಾರ್ಜಿತ ಸ್ವತ್ತು ಒಲಿದು ಬರುವುದು, ಧರ್ಮ ಕಾರ್ಯಗಳಿಗೆ ಮನಸ್ಸು.
ಸಿಂಹ: ಪ್ರಯಾಣದಲ್ಲಿ ತೊಂದರೆ ಮತ್ತು ನಷ್ಟ, ಮಹಿಳೆಯರೊಂದಿಗೆ ಕಿರಿಕಿರಿ, ಗೃಹ ಮತ್ತು ಸ್ಥಳ ಬದಲಾವಣೆಗೆ ಮನಸ್ಸು, ಅನಿರೀಕ್ಷಿತ ಸೋಲು, ನಷ್ಟ ನಿರಾಸೆಗಳು, ಆತಂಕ ಸೃಷ್ಟಿ, ನಿದ್ರಾಭಂಗ.
ಕನ್ಯಾ: ಸಹೋದರಿಯಿಂದ ಧನಲಾಭ, ಸಂಗಾತಿಯಿಂದ ನೋವು, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಅವಕಾಶಗಳಿಗೆ ಆತ್ಮೀಯರಿಂದಲೇ ತೊಂದರೆ.
ತುಲಾ: ಆರೋಗ್ಯ ಸಮಸ್ಯೆಗಳು ಕಾಡುವವು, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಕೆಲಸ ಕಾರ್ಯಗಳಲ್ಲಿ ಎಳೆದಾಟ, ಉದ್ಯೋಗ ನಿಮಿತ್ತ ಪ್ರಯಾಣ, ಧನ ನಷ್ಟ, ಸಾಲಭಾದೆಗಳ ಚಿಂತೆ.
ವೃಶ್ಚಿಕ ಅಧಿಕ ಖರ್ಚು, ಮಕ್ಕಳಿಂದ ನಷ್ಟ, ಮಕ್ಕಳ ಭವಿಷ್ಯದ ಚಿಂತೆ, ನಿದ್ರಾಭಂಗ, ಅನಾರೋಗ್ಯ, ತಂದೆಯಿಂದ ನಷ್ಟ ಮತ್ತು ಕಿರಿಕಿರಿ.
ಧನಸ್ಸು: ಸ್ವಂತ ವ್ಯಾಪಾರದಲ್ಲಿ ಅಧಿಕ ಲಾಭ, ಬಡ್ತಿ ಗೌರವ ಪ್ರಶಂಸೆ, ಮಕ್ಕಳಿಂದ ಲಾಭ, ಭೂಮಿ ವಾಹನ ಆಸ್ತಿಗಳಿಂದ ಅನುಕೂಲ, ತಾಯಿಯಿಂದ ಲಾಭ.
ಮಕರ: ಮಗ ಅಥವಾ ಮಗಳಿಂದ ನಷ್ಟ, ವೈವಾಹಿಕ ಜೀವನದಲ್ಲಿ ಸಮಸ್ಯೆ, ದೂರ ಪ್ರದೇಶದಲ್ಲಿ ಉದ್ಯೋಗ ಲಭಿಸುವುದು.
ಕುಂಭ: ಪ್ರಯಾಣ ರದ್ದು, ಆರೋಗ್ಯದಲ್ಲಿ ಏರುಪೇರು, ತಂದೆಯಿಂದ ಲಾಭ, ಧಾರ್ಮಿಕ ವ್ಯಕ್ತಿಗಳಿಂದ ಅನುಕೂಲ, ಸಹೋದರರಿಂದ ಧನಾಗಮನ.
ಮೀನ: ಅನಿರೀಕ್ಷಿತವಾದ ಸನ್ಮಾನ ಪ್ರಶಂಸೆಗಳು, ಆಕಸ್ಮಿಕವಾಗಿ ಉದ್ಯೋಗ ದೊರಕುವುದು, ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೈವನಿಂದನೆ ಮತ್ತು ಧರ್ಮನಿಂದನೆ ಮಾಡುವ ಸಂದರ್ಭ.