– ನಾಲ್ವರು ದರೋಡೆಕೋರರು ಪೊಲೀಸರ ವಶಕ್ಕೆ
– ಆರೋಪಿಗಳ ಮೊಬೈಲ್ ನೋಡಿ ಪೊಲೀಸರು ಶಾಕ್
ಕಲಬುರಗಿ: ಇತ್ತೀಚಿನ ಕೆಲ ವರ್ಷಗಳಲ್ಲಿ ಕ್ರೈಂ ಸುದ್ದಿಗಳ ಮೂಲಕವೇ ರಾಜ್ಯದ ಗಮನ ಸೆಳೆಯುತ್ತಿರುವ ಕಲಬುರಗಿ ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸ ನಿಲ್ಲುತ್ತಿಲ್ಲ. ಹೀಗಂತ ಪೊಲೀಸರು ಸಹ ಕೈಕಟ್ಟಿ ಕುಳಿತಿಲ್ಲ. ಬದಲಾಗಿ ಕ್ರೈಂ ಲೋಕದ ಮೇಲೆ ಒಂದು ಕಣ್ಣಿಟ್ಟು ಭರ್ಜರಿ ಬೇಟೆ ಮುಂದುವರಿಸಿದ್ದಾರೆ.
Advertisement
ಅದೇ ರೀತಿ ನಿನ್ನೆ ರಾತ್ರಿ ಕಲಬುರಗಿ ನಗರ ರೌಡಿ ನಿಗ್ರಹ ಪಡೆಯಿಂದ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಆರು ಜನ ಖತರ್ನಾಕ್ ದರೋಡೆಕೋರರ ಬಂಧನ ಮಾಡಿದ್ದಾರೆ. ಕಳೆದ ರಾತ್ರಿ ಕಲಬುರಗಿ ನಗರದ ಹೊರವಲಯದಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ವಾಹಿದ ಕೋತ್ವಾಲ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಮೊಬೈಲ್ ನೋಡಿ ಪೊಲೀಸರಿಗೆ ಶಾಕ್: ಆರೋಪಿಗಳನ್ನು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಗೆ ಕರೆ ತಂದಿದ್ದು, ಆರೋಪಿಗಳು ಈ ಹಿಂದೆ ಹಲವು ಯುವಕರಿಗೆ ದೋಣ್ಣೆಗಳಿಂದ ಹಲ್ಲೆ ಮಾಡಿ ಆ ವೀಡಿಯೋಗಳಿರುವುದು ಮೊಬೈಲ್‍ನಲ್ಲಿ ಪತ್ತೆಯಾಗಿವೆ. ಅವರ ಮಾತು ಕೇಳದಿದ್ರೆ ಹೀಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ ಜನರಿಗೆ ಬೆದರಿಸುತ್ತಿದ್ದೆವು ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ನಾಲ್ವರು ಆರೋಪಿಗಳ ಮೇಲೆ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.
Advertisement