ಮನೆಯ ಎಲ್ಲ ವಸ್ತುಗಳನ್ನು ಬಿಗ್ಬಾಸ್ ವಶಪಡಿಸಿಕೊಂಡು ಪ್ರತಿಯೊಂದು ವಸ್ತುಗಳ ಬೆಲೆಯನ್ನು ಮನೆಯ ಸ್ಪರ್ಧಿಗಳಿಗೆ ಅರ್ಥಮಾಡಿಸುತ್ತಿದ್ದಾರೆ. ಈಗಾಗಲೇ ಹಲವಾರು ಟಾಸ್ಕ್ಗಳನ್ನು ನೀಡುವ ಮೂಲಕ ಮನೆಯ ಸದಸ್ಯರಿಗೆ ಒಂದೊಂದಾಗಿ ಮನೆಯ ಸಾಮಾಗ್ರಿಗಳನ್ನು ಹಿಂದಿರುಗಿಸುತ್ತಿದ್ದಾರೆ.
Advertisement
ಈ ವಾರ ಮನೆಯ ಸ್ಪರ್ಧಿಗಳು ಊಟ, ತಿಂಡಿ, ನಿದ್ದೆ, ಬೆಡ್ ರೂಮ್ ಎಲ್ಲವನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ. ಅಲ್ಲದೇ ಸ್ನಾನ ಮಾಡಲು ಸೋಪು ಕೂಡ ಇಲ್ಲದೇ ಒದ್ದಾಡುತ್ತಿದ್ದಾರೆ. ಆದರೆ ಈ ಮಧ್ಯೆ ನಿನ್ನೆ ಶುಭಾ ಪೂಂಜಾ ಸೋಪು, ಶ್ಯಾಂಪೂ ಇಲ್ಲದೇ ಹೇಗೆ ಸ್ನಾನ ಮಾಡಬೇಕೆಂದು ಮನೆಯ ಸದಸ್ಯರಿಗೆ ಪಾಠ ಮಾಡಿದ್ದಾರೆ.
Advertisement
Advertisement
ಹೌದು ನಿನ್ನೆ ಶುಭಾ ಪೂಂಜಾ, ವೈಷ್ಣವಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಗೆ ಸ್ನಾನ ಮಾಡುವ ವಿಧಾನವನ್ನು ಹೇಳಿ ಕೊಟ್ಟಿದ್ದಾರೆ. ಮೊದಲಿಗೆ ಕೈಗೆ ಹ್ಯಾಂಡ್ ವಾಶ್ ತೆಗೆದು ಒಂದು ಮಗ್ಗೆ ಹಾಕಿಕೊಳ್ಳಿ, ನಂತರ ಅದನ್ನು ನೀರಿಗೆ ಮಿಕ್ಸ್ ಮಾಡಿ, ನಂತರ ಅದನ್ನು ಮೈಗೆ ಚೆನ್ನಾಗಿ ಉಜ್ಜಿಕೊಳ್ಳಿ, ಆದಾದ ನಂತರ ನೀರು ಹಾಕಿಕೊಂಡು ಸ್ನಾನ ಮಾಡಿ ಮುಗಿಸಿಕೊಳ್ಳಿ.
Advertisement
ಸ್ನಾನದ ಬಳಿಕ ಒಂದು ನಿಮಿಷ ಹಾಗೆಯೇ ನಿಂತುಕೊಳ್ಳಿ. ನಂತರ ಕೈನಲ್ಲಿ ಮೈನಲ್ಲಿರುವ ನೀರನ್ನು ತೆಗೆದು ಹಾಕಿ. ಆದಾದ ಬಳಿಕ ಮತ್ತೆ ಟಿಶ್ಯೂ ಪೇಪರ್ ತೆಗೆದುಕೊಂಡು ಅದನ್ನು ಸ್ವಲ್ಪ ರೋಲ್ ಮಾಡಿ ಮೈ ಒರೆಸಿಕೊಳ್ಳಿ. ಇಷ್ಟೇ ಕೆಲಸ ಮುಗಿಯಿತು ಹಾಕಿರುವ ಬಟ್ಟೆಯನ್ನು ಮತ್ತೆ ಹಾಕಿಕೊಳ್ಳಿ. ಇಲ್ವಾ ಗಾರ್ಬೆಜ್ ಬ್ಯಾಗ್ಸ್ನಲ್ಲಿ ಡ್ರೆಸ್ ಮಾಡಿಕೊಳ್ಳೋಣ ಅಷ್ಟೇ ಎಂದು ಹೇಳಿದ್ದಾರೆ.
ಬಿಗ್ಬಾಸ್ ನೀವ್ ನಮಗೆ ಏನ್ ಕೊಡದೇ ಹೋದರು ಪರವಾಗಿಲ್ಲ ಬದುಕ್ತೀವಿ. ಆದರೆ ಮಾತನಾಡುವುದಿಲ್ಲ. ಟೂ ಟೂ ಆನೆ ಮೇಲೆ, ಕುದುರೆ ಮೇಲೆ, ಒಂಟೆ ಮೇಲೆ, ಕೋಳಿ ಮೇಲೆ, ಹುಂಜ ಮೇಲೆ ಎಲ್ಲಾದರ ಮೇಲೆ ಟೂ ಟೂ ಟೂ ಎಂದು ಬಿಗ್ಬಾಸ್ಗೆ ಹೇಳಿದ್ದಾರೆ.