ಹಾಸನ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡವರ ವಿಷಯ ನಮಗ್ಯಾಕೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಡಿ ವಿಚಾರವಾಗಿ ಎರಡು ರಾಷ್ಟ್ರೀಯ ಪಕ್ಷಗಳು ಹೊಡೆದಾಡುತ್ತಿದ್ದಾರೆ. ದೊಡ್ಡವರ ವಿಷಯ ನಮಗ್ಯಾಕೆ. ಬಡವ ನೀ ಮಡಿದಂಗೆ ಇರು ಅಂತ ನಾವಿದ್ದರೆ ಸಾಕು. ನಮ್ಮ ಜನರಿಗೆ ಕುಡಿಯುವ ನೀರಿಲ್ಲ ಬೋರ್ ವೆಲ್‍ಕೊರಿರಿ ಎಂದರೆ ಕೇಳೊರಿಲ್ಲ ಎಂದು ಹೇಳಿದರು.
ಹಾಸನ ನಗರದ ಸುತ್ತಮುತ್ತ ಹಲವಾರು ಖಾಸಗೀ ಲೇಔಟ್‍ಗಳು ಕಾನೂನು ಬಾಹಿರವಾಗಿ ನಡೆಯುತ್ತಿದೆ. ಇದಕ್ಕೆ ಕೆಲವು ಅಧಿಕಾರಿಗಳೂ ಸಹ ಭಾಗಿಯಾಗಿದ್ದಾರೆ. ಹೂಡಾ ಹಾಗೂ ಹೌಸಿಂಗ್ ಬೊರ್ಡ್ ಮುಚ್ಚೋದು ಒಳ್ಳೆಯದು ಅಂತ ಸಿಎಂ ಹಾಗೂ ವಸತಿ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಅಧಿಕಾರಿಗಳಿಗೆ ಲೂಟಿ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಇದೊಂದು ದಂಧೆಯಾಗಿ ಮಾರ್ಪಟ್ಟಿದೆ. ಹಾಸನ ನಗರದಲ್ಲಿ ಯಾವ ಜಾಗ, ಯಾರ ಹೆಸರಿಗೆ ಬೇಕಾದರೂ ಬರೆಸಿಕೊಳ್ಳಬಹುದು. ಪರ್ಸೇಂಟ್ ಲೆಕ್ಕದಲ್ಲಿ ಹಂಚಿಕೆಯಾಗಿ ಲೇಔಟ್‍ಗಳು ನಡೆಯುತ್ತಿವೆ. ಸ್ಥಳೀಯವಾಗಿ ಸಣ್ಣಪುಟ್ಟ ಲೇಔಟ್ ಮಾಡುವವರಿಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ಸಮಗ್ರವಾಗಿ ತನಿಖೆ ನಡೆಸಬೇಕು. ಒಂದು ಇಲಾಖೆಯ ಹೆಸರೇಳಿ ಸೈಟ್ ಮಾಡಿ, ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.