ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಟ್ಯಾಬ್ ವಿತರಿಸಲು ಪಬ್ಲಿಕ್ ಟಿವಿ, ರೋಟರಿ ಕ್ಲಬ್ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ಕನ್ಮಮಂಗಲದ ತಿರುಮಲಮ್ಮ ರಂಗಪ್ಪ ಚಾರಿಟೇಬಲ್ ಟ್ರಸ್ಟ್ ನ ತಂಡ ಕೈಜೋಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದ ಸರ್ಕಾರಿ ಪ್ರೌಢ ಶಾಲೆಯ 146 ಮಕ್ಕಳಿಗೆ ಅನುಕೂಲವಾಗುವಂತೆ 73 ಟ್ಯಾಬ್ ವಿತರಣೆ ಮಾಡಲಾಯಿತು.
ಕನ್ಮಮಂಗಲದ ತಿರುಮಲಮ್ಮ ರಂಗಪ್ಪ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಶಿವರಾಮಯ್ಯ ತಮ್ಮ ತಂದೆ ತಾಯಿಯ ನೆನಪಿಗಾಗಿ ಟ್ಯಾಬ್ ವಿತರಿಸಿದರು. ಟ್ರಸ್ಟ್ ನ ಸದಸ್ಯರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಡಿಪಿಐ ಗಂಗಮಾರೇಗೌಡ, ಬಿಇಓ ಬೈಯಾರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಿಗೆ ಪಬ್ಲಿಕ್ ಟಿವಿಯ ಮಹತ್ವಾಕಾಂಕ್ಷೆಯ ಯೋಜನೆ ಸಂಪೂರ್ಣವಾಗಿ ತಲುಪಿ ಮನೆಮಾತಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಪಬ್ಲಿಕ್ ಟಿವಿ, ದಾನಿಗಳಿಗೆ ಹಾಗೂ ಶಾಲೆಗೆ ಉತ್ತಮ ಅಂಕಗಳಿಸುವ ಮೂಲಕ ಮಾದರಿಯಾಗುವಂತೆ ಹಾಗೂ ಟ್ಯಾಬ್ ಬಗ್ಗೆ ಸಂಕ್ಷಿಪ್ತವಾಗಿ ಮಕ್ಕಳಿಗೆ ವಿವರಿಸಲಾಯಿತು.