ಬೆಂಗಳೂರು: ದೇಹ ಹಾಗೂ ಶೂಗೆ ಚಿನ್ನದ ಲೇಪನ ಮಾಡಿಕೊಂಡು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ದುಬೈನಿಂದ ಕೆಐಎಎಬಿ ಗೆ ಆಗಮಿಸಿದ ಇಬ್ಬರು ಪ್ರಯಾಣಿಕರ ತಪಾಸಣೆ ವೇಳೆ ಅನುಮಾನ ಬಂದಿದೆ. ಪರಿಶೀಲನೆ ನಡೆಸಿದಾಗ ಇಬ್ಬರು ಪ್ರಯಾಣಿಕರ ದೇಹಗಳ ಮೇಲೆ ಚಿನ್ನದ ಪೇಸ್ಟನ್ನ ಕೋಟಿಂಗ್ ಮಾಡಿಕೊಂಡಿರೋದು ಹಾಗೂ ಶೂ ಗೂ ಸಹ ಚಿನ್ನದ ಕೋಟಿಂಗ್ ಮಾಡಿಕೊಂಡಿರೋದು ಕಂಡುಬಂದಿದೆ. ಕೂಡಲೇ ಲೇಪಿತ ಚಿನ್ನವನ್ನ ತೆಗೆದು ತೂಕ ಹಾಕಲಾಗಿ ಬರೋಬ್ಬರಿ 1.3 ಕೆಜಿ ತೂಕ ಆಗಿದೆ ಎನ್ನಲಾಗಿದೆ.
ಇಬ್ಬರ ಬಳಿ ಇದೇ ವೇಳೆ ಒಂದು ಡ್ರೋನ್ ಹಾಗೂ ಐಪೋನ್ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರಿಸುಮಾರು ಅಂದಾಜು 75 ಲಕ್ಷ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.