– 32,96,300 ರೂ. ಮೌಲ್ಯದ ಚಿನ್ನವಶ
ಮಂಗಳೂರು: ದೇಹಕ್ಕೆ ಚಿನ್ನದ ಲೇಪ ಹಚ್ಚಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆರೋಪಿಯನ್ನು ಮಂಗಳೂರಿನ ಅಬೂಬಕರ್ ಸಿದ್ಧೀಕ್ ಎಂದು ಗುರುತಿಸಲಾಗಿದೆ. ಈತ ಮಂಗಳೂರು ವಿಮಾನದ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದಾನೆ.
ದುಬೈನಿಂದ ಮಂಗಳೂರಿಗೆ ಸ್ಪೈಸ್ ವಿಮಾನದ ಮೂಲಕ ಬಂದಿದ್ದ ಸಿದ್ದೀಕ್, ಅನುಮಾನ ಬಾರದಂತೆ ದೇಹಕ್ಕೆ ಚಿನ್ನದ ಲೇಪವನ್ನು ಹಚ್ಚಿದ್ದ. ಚಿನ್ನವನ್ನು ಪೌಡರ್ ರೂಪದಲ್ಲಿ ಮಾರ್ಪಾಟು ಮಾಡಿ ಲೇಪವಾಗಿ ಹಚ್ಚಿಕೊಂಡಿದ್ದ. ಆದರೆ ಅಧಿಕಾರಿಗಳ ಕಾರ್ಯಾಚರಣೆಯ ವೇಳೆ ಈ ವಿಚಾರ ಬಯಲಾಗಿದೆ.
ಆರೋಪಿಯ ದೇಹದ ಲೇಪದಿಂದ 32,96,300 ರೂಪಾಯಿ ಮೌಲ್ಯದ 24 ಕ್ಯಾರೆಟ್ ನ 614 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.