ತಿರುವನಂತಪುರಂ: ಸಾಮಾನ್ಯವಾಗಿ ದೇಶ ಸುತ್ತುವ ಆಸೆ ಎಲ್ಲರಿಗೂ ಇರುತ್ತದೆ. ಹಾಗೇ ಇಲ್ಲೊಂದು ಜೋಡಿ ದೇಶ ಸುತ್ತುವುದಕ್ಕಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟಿದೆ. ಕಾರು ಹತ್ತಿ ಹೊರಟಿರುವ ಪ್ರೇಮ-ಪಕ್ಷಿಗಳ ಕಥೆ ಕೇಳಿದರೆ ಖಂಡಿತವಾಗಿಯೂ ಆಶ್ಚರ್ಯವಾಗುತ್ತೀರಿ.
ಕೇರಳದ ತ್ರಿಶೂರ್ ಮೂಲದ ದಂಪತಿ ಹರಿಕೃಷ್ಣ ಮತ್ತು ಲಕ್ಷ್ಮೀಕೃಷ್ಣ ತಮ್ಮ ಕಾರಿನಲ್ಲಿ ದೇಶ ಸುತ್ತುವ ಆಸೆಯನ್ನು ಹೊಂದಿದ್ದರು. ಹೀಗಾಗಿ ತಾವು ಮಾಡುತ್ತಿರುವ ಕೆಲಸಕ್ಕೆ ರಾಜೀನಾಮೆ ಕೊಟ್ಟು ಟ್ರಿಪ್ ಹೋಗಲು ಪ್ಲ್ಯಾನ್ ಮಾಡಿದರು.
ತಮ್ಮ ಪ್ರಯಾಣವನ್ನು 2.5 ಲಕ್ಷ ಹಣದಲ್ಲಿ ಮುಗಿಸಬೇಕು ಮತ್ತು ಎಲ್ಲೆಲ್ಲಿ ಹೋಗಬೇಕು ಎಂದು ಪ್ಲ್ಯಾನ್ ಮಾಡಿಕೊಂಡರು. ದೇಶದ 23 ರಾಜ್ಯಗಳಿಗೆ ಭೇಟಿ ನೀಡುವ ಯೋಜನೆಯನ್ನು ರೂಪಿಸಿಕೊಂಡರು. ಹಾಗೂ ತಮ್ಮ ಪ್ರವಾಸಕ್ಕೆ ಬೇಕಾಗುವ ಅಗತ್ಯ ವಸ್ತುಗಳಾದ, ಬೇಡ್, ನೀರು, ಗ್ಯಾಸ್ ತಮ್ಮ ಕಾರಿನಲ್ಲಿಯೇ ಇಟ್ಟುಕೊಳ್ಳಲು ವ್ಯವಸ್ಥೆ ಮಾಡಿಕೊಂಡರು.
ನಾವು ಹೋಗುತ್ತಿದ್ದ ಮಾರ್ಗದಲ್ಲಿ ಕೆಲವೊಮ್ಮೆ ಅಡುಗೆ ಮಾಡುಕೊಳ್ಳುತ್ತಿದ್ದೆವು, ಇಲ್ಲವಾದರೆ ಡಾಬಾಗಳಲ್ಲಿ ಊಟವನ್ನು ಮಾಡುತ್ತಿದ್ದೆವು. ನಮ್ಮ ಜರ್ನಿ 2020ರ ಅಕ್ಟೋಬರ್‍ನಲ್ಲಿ ಪ್ರಾರಂಭವಾಯಿತ್ತು. ಇದುವರೆಗೂ ಕರ್ನಾಟಕದ ಬೆಂಗಳೂರು, ಉಡುಪಿ, ಗೋಕರ್ಣ ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ, ಮುಂಬೈ ಮೂಲಕವಾಗಿ ರಾಜಸ್ಥಾನ, ಗುಜರಾತ್ ಪ್ರವಾಸ ಮುಕ್ತಾಯವಾಗಿದ್ದು, ಇದೀಗ ಜಮ್ಮು-ಕಾಶ್ಮೀರದಲ್ಲಿ ಇದ್ದೇವೆ. 130 ದಿನಗಳಲ್ಲಿ ಸುಮಾರು 10 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದ್ದೇವೆ. ಬೇರೆ ಬೇರೆ ಸ್ಥಳಗಳ ಜನರ ಜೀವನವನ್ನು ನೋಡಿ ತಿಳಿದುಕೊಂಡೆವು ಎಂದು ದಂಪತಿ ಹೇಳಿದ್ದಾರೆ.