ನವದೆಹಲಿ: ದೇಶದ ಚತುರ ರಾಜಕಾರಿಣಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಭಾರತ ರತ್ನ ಪ್ರಶಸ್ತಿ ಪಡೆದಿದ್ದ 84 ವರ್ಷದ ಪ್ರಣಬ್ ಮುಖರ್ಜಿ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಆಗಸ್ಟ್ 10 ರಿಂದ ಶ್ವಾಸಕೋಶ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಕೋಮಾಗೆ ಜಾರಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
Advertisement
Sad to hear that former President Shri Pranab Mukherjee is no more. His demise is passing of an era. A colossus in public life, he served Mother India with the spirit of a sage. The nation mourns losing one of its worthiest sons. Condolences to his family, friends & all citizens.
— President of India (@rashtrapatibhvn) August 31, 2020
Advertisement
ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಇಲ್ಲ ಎಂದು ಕೇಳಲು ಬೇಸರವಾಗುತ್ತಿದೆ. ಅವರ ನಿಧನ ಒಂದು ಯುಗದ ಹಾದುಹೋಗುವಿಕೆ. ಸಾರ್ವಜನಿಕ ಜೀವನದಲ್ಲಿ ಮಾತೃ ದೇವತೆ ಭಾರತಕ್ಕೆ ಸ್ಫೂರ್ತಿಯ ಮನೋಭಾವದಿಂದ ಸೇವೆ ಸಲ್ಲಿಸಿದ್ದರು. ದೇಶವು ತನ್ನ ಯೋಗ್ಯ ಪುತ್ರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ದೇಶದ ನಾಗರಿಕರಿಗೆ ಸಂತಾಪ ಸಂತಾಪ ಸೂಚಿಸುತ್ತಿದ್ದೇನೆ. ದೇಶದ ಪ್ರಥಮ ಪ್ರಜೆಯಾಗಿ ಅವರು ರಾಷ್ಟ್ರಪತಿ ಭವನವನ್ನು ಜನರ ಹತ್ತಿರ ತಂದು ಎಲ್ಲರೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಸಾರ್ವಜನಿಕರ ಭೇಟಿಗಾಗಿ ಸದಾ ದ್ವಾರಗಳನ್ನು ತೆರೆದಿಟ್ಟಿದ್ದರು ಎಂದು ತಿಳಿಸಿದ್ದಾರೆ.
Advertisement
Deeply anguished by the demise of former president of India, Shri Pranab Mukherjee ji. He was widely respected by the people across all sections of society.
His demise is a personal loss. He had tremendous knowledge of India’s history, diplomacy, public policy and also defence.
— Rajnath Singh (@rajnathsingh) August 31, 2020
Advertisement
ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ಪ್ರಣಬ್ ಮುಖರ್ಜಿ ಅವರ ನಿಧನದಿಂದ ತೀವ್ರ ನೋವಾಗಿದೆ. ಅವರನ್ನು ಸಮಾಜದ ಎಲ್ಲಾ ವರ್ಗಗಳ ಜನರು ವ್ಯಾಪಕವಾಗಿ ಗೌರವಿಸುತ್ತಿದ್ದರು. ಅವರ ನಿಧನದಿಂದ ವೈಯುಕ್ತಿಕವಾಗಿ ನಷ್ಟವಾಗಿದೆ. ಅವರು ಭಾರತ ಇತಿಹಾಸ, ರಾಜತಾಂತ್ರಿಕತೆ, ಸಾರ್ವಜನಿಕ ನೀತಿ ಮತ್ತು ರಕ್ಷಣೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು ಎಂದು ಬರೆದುಕೊಂಡಿದ್ದಾರೆ.
Pranabda epitomised simplicity, honesty and strength of character. He served our country with diligence and dedication.
His contribution to public life was invaluable. My deepest condolences to his bereaved family. Om Shanti!
— Rajnath Singh (@rajnathsingh) August 31, 2020