– ಅಪರಾಧ ಸಂಖ್ಯೆಯಲ್ಲಿ ಇಳಿಕೆ
ನವದೆಹಲಿ: ರಾಜಧಾನಿ ದೆಹಲಿಯಲ್ಲಿ 5 ಗಂಟೆಗೊಂದು ರೇಪ್ ಮತ್ತು 19 ಗಂಟೆಗೊಂದು ಕೊಲೆಯಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್.ಎಸ್. ಶ್ರೀವಾಸ್ತವ ತಿಳಿಸಿದ್ದಾರೆ.
ಕಳೆದ ಮಾರ್ಚ್ ನಿಂದ ಲಾಕ್‍ಡೌನ್ ಜಾರಿಯಲ್ಲಿ ಇರುವ ಕಾರಣದಿಂದಾಗಿ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕೊಲೆ ಸರಗಳ್ಳತನ, ರೇಪ್ ನಡೆಯುತ್ತಿರುವ ಕುರಿತಾಗಿ ಪೊಲೀಸರು ಅಂಕಿ-ಅಂಶಗಳ ಸಹಿತವಾಗಿ ಪ್ರಕಟಿಸಿದ್ದಾರೆ.
2019ರಲ್ಲಿ ನಾಲ್ಕು ಗಂಟೆಗೊಂದು ಅತ್ಯಾಚಾರ ನಡೆಯುತ್ತಿತ್ತು. ಅತ್ಯಾಚಾರ ಪ್ರಕರಣದಲ್ಲಿ ಶೇ.2ರಷ್ಟರಲ್ಲಿ ಮಾತ್ರ ಆರೋಪಿಗಳು ಸಂತ್ರಸ್ತರಿಗೆ ಅಪರಿಚಿತರಾಗಿದ್ದಾರೆ. 17 ಗಂಟೆಗೊಂದು ಹತ್ಯೆ, 12 ನಿಮಿಷಕ್ಕೊಂದು ವಾಹನ ಕಳವು ನಡೆಯುತ್ತಿತ್ತು. ಸರಗಳ್ಳತನಕ್ಕೆ ಸಂಬಂಧಿಸಿದಂತೆ ದಿನಕ್ಕೆ 17 ಪ್ರಕರಣಗಳು ನಡೆಯುತ್ತಿದ್ದವು. ಈಗ 24 ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಧಾನಿಯಲ್ಲಿ 2020ರಲ್ಲಿ ಅಪರಾಧಗಳ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿವೆಯಾಗಿದೆ. 1,699 ರೇಪ್, 2,186 ಲೈಂಗಿಕ ಕಿರುಕುಳ ಪ್ರಕರಣ, 65 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 2,168 ರೇಪ್, 2,921 ಲೈಂಗಿಕ ಕಿರುಕುಳ, 109 ಫೋಕ್ಸೋ ಕಾಯ್ದೆ ಅಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಿದ್ದಾರೆ.