ತಿರುವನಂತಪುರಂ: ದೇಶದಲ್ಲಿಯೇ ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದ ಕೇರಳದ ತ್ರಿಶ್ಯೂರಿನ ಮೂಲದ ವಿದ್ಯಾರ್ಥಿನಿಗೆ ಎರಡನೇ ಬಾರಿಗೆ ಸೋಂಕು ದೃಢಪಟ್ಟಿದೆ.
ಚೀನಾದ ವುಹಾನ್ ವೈದ್ಯಕೀಯ ವಿಶ್ವವಿದ್ಯಾಲಯದ ವ್ಯಾಸಂಗ ಮಾಡುತ್ತಿರುವ ಕೇರಳದ 20 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಗೆ ಮತ್ತೆ ಕೊರೊನಾ ಬಂದಿದೆ. ಚೀನಾದ ವುಹಾನ್ ನಗರದಿಂದ ಕಳೆದ ಜನವರಿ 30ರಂದು ವಾಪಸ್ ಆಗಿದ್ದಾಗ ಈಕೆಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದು ದೇಶದಲ್ಲಿ ಪತ್ತೆಯಾದ ಮೊದಲ ಕೊರೊನಾ ಪ್ರಕರಣ ಆಗಿತ್ತು.
Advertisement
Advertisement
ಭಾರತಕ್ಕೆ ವಾಪಸ್ಸಾದ ಬಳಿಕ ಇತ್ತೀಚಿಗೆ ಶಿಕ್ಷಣ ಕೆಲಸದ ಸಂಬಂಧ ಯುವತಿಯನ್ನು ದೆಹಲಿಗೆ ತೆರಳುವಾಗ ಮುನ್ನ ಟೆಸ್ಟಿಂಗ್ ಗೆ ಒಳಪಡಿಸಲಾಗಿದೆ. ಈ ವೇಳೆ ಆಂಟಿಜನ್ ಪರೀಕ್ಷೆಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ. ಬಳಿಕ ಆರ್‌ಟಿಪಿಸಿಆರ್ ಟೆಸ್ಟ್ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
Advertisement
ತ್ರಿಶ್ಯೂರಿನ ಜಿಲ್ಲಾ ವೈದ್ಯಕೀಯ ಅಧಿಕಾರಿ ಪ್ರತಿಕ್ರಿಯಿಸಿ, ವಿದ್ಯಾರ್ಥಿನಿಗೆ ಯಾವುದೇ ರೋಗ ಲಕ್ಷಣ ಇಲ್ಲ. ಹೀಗಾಗಿ ಆಕೆ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾಳೆ. ಆಕೆಯ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ 3ನೇ ಅಲೆ ಎದುರಿಸಲು ಕೇಂದ್ರದಿಂದ ರಾಜ್ಯಕ್ಕೆ 1,500 ಕೋಟಿ: ಸಚಿವ ಸುಧಾಕರ್
Advertisement
ಜುಲೈ 13 ರಂದು ಈಕೆ ಸೋಂಕು ಬಂದಿದೆ. ವಿದ್ಯಾರ್ಥಿನಿ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿರಲಿಲ್ಲ.
ಕೇರಳ ಮೂಲದ ವಿದ್ಯಾರ್ಥಿನಿ ವುಹಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುತ್ತಿದ್ದಳು. ಕಳೆದ ವರ್ಷ ರಜೆ ಹಿನ್ನೆಲೆ ಕೇರಳಕ್ಕೆ ಆಗಮಿಸಿದ ವೇಳೆ ವಿದ್ಯಾರ್ಥಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜನವರಿ 30ರಂದು ವರದಿ ಪಾಸಿಟಿವ್ ಬಂದಿತ್ತು. ತ್ರಿಶ್ಯೂರ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಫೆಬ್ರವರಿ 20 ರಂದು ವಿದ್ಯಾರ್ಥಿನಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಳು.