ಧಾರವಾಡ: ದೇಶದ ಮೊದಲ ಕಾರ್ಗೀಲ್ ಸ್ತೂಪ ಸ್ಥಾಪನೆ ರೂವಾರಿ ಕೃಷ್ಣ ಜೋಶಿ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಹೆಚ್‍ಡಿಕೆ ಪ್ರತಿಯೊಂದು ಕೆಲಸದಲ್ಲಿ ಡೀಲ್ ಮಾಡುವ ಮಾಸ್ಟರ್: ಸುಮಲತಾ ಅಂಬರೀಶ್
ಕೃಷ್ಣ ಜೋಶಿ (76) ಧಾರವಾಡದ ಹಿರಿಯ ಕನ್ನಡಪರ ಚಿಂತಕರಾಗಿದ್ದರು. ಇವರನ್ನು ಅನಾರೋಗ್ಯದ ಹಿನ್ನೆಲೆ ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಿಸದೇ ಕಳೆದ ರಾತ್ರಿ ಜೋಶಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಟಿ ಹರಿಪ್ರಿಯಾಗೆ ಹಾಲಿವುಡ್ ಪ್ರಶಸ್ತಿ
Advertisement
ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾಗಿದ್ದ ಜೋಶಿ, ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಧಾರವಾಡದಲ್ಲಿರುವ ದೇಶದ ಮೊದಲ ಕಾರ್ಗಿಲ್ ಸ್ತೂಪ್ ಸ್ಥಾಪನೆಯ ರೂವಾರಿಯಾಗಿದ್ದರು. ಇವತ್ತು ಜೋಶಿ ಅವರ ಪಾರ್ಥೀವ ಶರೀರವನ್ನು 9.30ಕ್ಕೆ ಧಾರವಾಡ ಕಾರ್ಗಿಲ್ ಸ್ತೂಪ್‍ಕ್ಕೆ ತಂದು ಅಂತಿಮ ನಮನ ಸಲ್ಲಿಸಲಾಯಿತು.
Advertisement
Advertisement
ನಂತರ 10 ರಿಂದ 11ಗಂಟೆಯವರೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅದಾದ ನಂತರ ಜೋಶಿ ಅವರ ಪಾರ್ಥಿವ ಶರೀರವನ್ನು ನಗರದ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ತಂದು ಅಂತ್ಯಸಂಸ್ಕಾರ ಮಾಡಲಾಯಿತು. ಕೃಷ್ಣಾ ಜೋಶಿ ಅವರು ಪ್ರತಿ ವರ್ಷ ಕಾರ್ಗಿಲ್ ವಿಜಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದರು.