ನವದೆಹಲಿ: ದೇಶದಲ್ಲಿ ಕೊರೊನಾಸುರ ತನ್ನ ಆರ್ಭಟ ಮುಂದುವರೆಸಿದ್ದು, ಸೋಂಕಿತರ ಸಂಖ್ಯೆ 9 ಲಕ್ಷದ ಗಡಿ ದಾಟಿದೆ.
ದೇಶದಲ್ಲಿ ಬರೋಬ್ಬರಿ 9,06,752ಕ್ಕೆ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 28,498 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ 3,11,565 ಸಕ್ರಿಯ ಪ್ರಕರಣಗಳಿವೆ.
Advertisement
ನಿನ್ನೆ ಒಂದೇ ದಿನ 553 ಮಂದಿ ಕೊರೊನಾಗೆ ಬಲಿ ಆಗಿದ್ದು, ಒಟ್ಟು ಮೃತರ ಸಂಖ್ಯೆ 23,727 ದಾಟಿದೆ. ದೇಶದಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ ಹೆಚ್ಚಳ ಆಗ್ತಿದ್ದರೂ, ಚೇತರಿಸಿಕೊಳ್ಳುವವರ ಪ್ರಮಾಣವೂ ಹೆಚ್ಚಾಗುತ್ತಿದೆ.
Advertisement
India’s #COVID19 case tally crosses 9 lakh mark with 28,498 new cases & 553 deaths reported in the last 24 hours.
Total positive cases stand at 9,06,752 including 3,11,565 active cases, 5,71,460 cured/discharged/migrated and 23,727 deaths: Ministry of Health pic.twitter.com/EnYWzKOTDB
— ANI (@ANI) July 14, 2020
Advertisement
19 ಸಾವಿರ ಮಂದಿ ನಿನ್ನೆ ಸೋಂಕಿನಿಂದ ಚೇತರಿಸಿಕೊಂಡಿದ್ದು, 5,71,459 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ 62.5 ರಷ್ಟಿದೆ. ಮೊದಲ ಮೂರು ಸ್ಥಾನದಲ್ಲಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಇದ್ದರೆ, ನಾಲ್ಕನೇ ಸ್ಥಾನಕ್ಕಾಗಿ ಗುಜರಾತ್, ಕರ್ನಾಟಕ ನಡುವೆ ಪೈಪೋಟಿ ಏರ್ಪಟ್ಟಿದೆ.
Advertisement
ಭಾನುವಾರ 29,271 ಹೊಸ ಪ್ರಕರಣಗಳು ದೃಢವಾಗಿತ್ತು. ಪ್ರತಿ ಸೋಮವಾರ ಹೊಸ ಪ್ರಕರಣ ಸಂಖ್ಯೆ ಪತ್ತೆ ಇಳಿಮುಖವಾಗುವಂತೆ ಈ ವಾರವೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತು. ಉಳಿದಂತೆ ಮಹಾರಾಷ್ಟ್ರ 6497, ದೆಹಲಿ 1246, ಉತ್ತರ ಪ್ರದೇಶದಲ್ಲಿ 1664, ಗುಜರಾತ್ 902, ಮಧ್ಯ ಪ್ರದೇಶ 575, ಪಂಜಾಬ್ 357, ಛತ್ತೀಸ್ಗಢ 184, ಆಂಧ್ರ ಪ್ರದೇಶ 1935, ತೆಲಂಗಾಣ 1550 ಹೊಸ ಪ್ರಕರಣಗಳು ಸೋಮವಾರ ವರದಿಯಾಗಿತ್ತು. ತಮಿಳುನಾಡಿನಲ್ಲಿ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ.