ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 1,86,364 ಹೊಸ ಪ್ರಕರಣಗಳು ವರದಿಯಾಗಿವೆ. 3,660 ಜನ ಕೊರೊನಾಗೆ ಬಲಿಯಾಗಿದ್ದು, 2,59,459 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
India reports 1,86,364 new #COVID19 cases, 2,59,459 discharges & 3,660 deaths in last 24 hrs, as per Health Ministry
Total cases: 2,75,55,457
Total discharges: 2,48,93,410
Death toll: 3,18,895
Active cases: 23,43,152
Total vaccination: 20,57,20,660 pic.twitter.com/px2jTVCVhY
— ANI (@ANI) May 28, 2021
Advertisement
ಕಳೆದ 44 ದಿನಗಳಲ್ಲಿ ಅತ್ಯಂತ ಕಡಿಮೆ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 23,43,152ಕ್ಕೆ ಇಳಿಕೆಯಾಗಿದೆ. ಅಲ್ಲದೆ ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 76,755ಕ್ಕೆ ಇಳಿಕೆಯಾಗಿದೆ.
Advertisement
ಕಳೆದ 24 ಗಂಟೆಗಳಲ್ಲಿ 2,59,459 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 2,48,93,410 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.90.34ಕ್ಕೆ ಹೆಚ್ಚಳವಾಗಿದೆ. ವಾರದ ಪಾಸಿಟಿವ್ ಶೇ.10.42 ಹಾಗೂ ದಿನದ ಪಾಸಿಟಿವ್ ರೇಟ್ ಶೇ.9ರಷ್ಟಿದೆ. ಕಳೆದ ನಾಲ್ಕು ದಿನಗಳಿಂದ ದಿನದ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಹೆಚ್ಚಾಗಿಲ್ಲ.
Advertisement
Advertisement
ಈ ವರೆಗೆ 2,75,55,457 ಕೊರೊನಾ ಕೇಸ್ ಪತ್ತೆಯಾಗಿದ್ದು, ಒಟ್ಟು 3,18,895 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ವರೆಗೆ ಒಟ್ಟು 20.57 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ನಿನ್ನೆ 20,70,508 ಕೊರೊನಾ ಪರೋಕ್ಷೆ ನಡೆಸಲಾಗಿದೆ. ಈ ವರೆಗೆ 33,90,39,861 ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.