ನವದೆಹಲಿ: ದೇಶದಲ್ಲಿ ಶೇ.28.21 ರಷ್ಟು ಮಾತ್ರ ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಗುಣಮುಖ ಪ್ರಮಾಣ ಶೇ.69.80 ಮತ್ತು ಮರಣ ದರ ಶೇ.1.99 ರಷ್ಟಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸೋಮವಾರ ಒಂದೇ ದಿನ ದೇಶದಲ್ಲಿ 53,601 ಮಂದಿಗೆ ಸೋಂಕು ತಗುಲಿದ್ದು, 871 ಸೋಂಕಿತರು ನಿಧನರಾಗಿದ್ದಾರೆ. ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 22,68,676ಕ್ಕೇರಿಕೆ ಆಗಿದ್ದು, 6,39,929 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ಕೊರೊನಾದಿಂದ 15,83,490 ಮಂದಿ ಗುಣಮಖರಾಗಿ ಡಿಸ್ಚಾರ್ಜ್ ಆಗಿದ್ರೆ 45,257 ಜನರು ಸಾವನ್ನಪ್ಪಿದ್ದಾರೆ.
Now, India has 28.21% active cases, 69.80% cured/discharged/migrated and 1.99% deaths: Government of India. https://t.co/anIefKqDIG
— ANI (@ANI) August 11, 2020
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮಾಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕರ್ನಾಟಕ ಮೊದಲ ನಾಲ್ಕು ಸ್ಥಾನದಲ್ಲಿವೆ. ನೆರೆಯ ಮಹಾರಾಷ್ಟ್ರದಲ್ಲಿ ಸೋಮವಾರ 9,181 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,24,513ಕ್ಕೇರಿಕೆಯಾಗಿದೆ.
ರಾಜ್ಯದಲ್ಲಿಂದು 4,267 ಕೊರೊನಾ ಪ್ರಕರಣ ಪತ್ತೆ 5,218 ಜನ ಡಿಸ್ಚಾರ್ಜ್ https://t.co/3r141OvotP#Karnataka #Corona #Covid19 #KannadaNews
— PublicTV (@publictvnews) August 10, 2020