ನವದೆಹಲಿ: ದೇಶದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು ಕಳೆದ 24 ಗಂಟೆಯಲ್ಲಿ ಕಳೆದ 24 ಗಂಟೆಯಲ್ಲಿ 54, 736 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ನಿನ್ನೆ ಒಂದೇ ದಿನ 853 ಮಂದಿ ಸಾವನ್ನಪ್ಪಿದು, ಈ ಮೂಲಕ ಸೋಂಕಿತರ ಸಂಖ್ಯೆ ಹದಿನೇಳು ಲಕ್ಷದ ಗಡಿ ದಾಟಿದೆ.
India's COVID tally crosses 17 lakh mark with 54,736 positive cases & 853 deaths in the last 24 hours.
Total #COVID19 cases stand at 17,50,724 including 5,67,730 active cases, 11,45,630 cured/discharged/migrated & 37,364 deaths: Health Ministry pic.twitter.com/WXGdKfaHUW
— ANI (@ANI) August 2, 2020
ದೇಶದಲ್ಲಿ ಈವರೆಗೂ ಒಟ್ಟು 17,50, 724 ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು, ಈ ಪೈಕಿ 5,67,730 ಸಕ್ರಿಯ ಪ್ರಕರಣಗಳಿದ್ದು 11,45,630 ಮಂದಿ ಗುಣಮುಖವಾಗಿದ್ದಾರೆ. ಈವರೆಗೂ ದೇಶದಲ್ಲಿ 37,364 ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾದಿಂದ ಗುಣಮುಖರಾಗುತ್ತಿರೋರ ಪ್ರಮಾಣ ಶೇ.65.43 ಇದ್ರೆ, ಸೋಂಕಿತರ ಸಂಖ್ಯೆ ಪ್ರಮಾಣ ಶೇ.11.81 ಇದೆ. ನಿನ್ನೆ ಒಂದೇ ದೇಶದಲ್ಲಿ 4, 63,172 ಮಂದಿಯನ್ನು ಪರೀಕ್ಷೆ ಒಳಪಡಿಲಾಗಿದೆ. ಈವರೆಗೂ 1,91, 21,831 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.
ಕೊರೊನಾ ವೈರಸ್, ಕೋವಿಡ್ 19, ಭಾರತ, ಪಬ್ಲಿಕ್ ಟಿವಿ